ಭಾರತ ಸಂವಿಧಾನದ ಮೂಲ ಪ್ರತಿ ಹಿಡಿದು ನೋಡಿದರೆ ಗೊತ್ತಾಗುತ್ತದೆ ಈ ಜಾತ್ಯತೀತ ಅನ್ನುವ ಪದ ಮೂಲ ಸಂವಿಧಾನದ ಅಂದರೆ 1949ರ ನವೆಂಬರ್ 26 ರ ಮೂಲ ಪ್ರತಿಯಲ್ಲಿ ಇರಲೇ ಇಲ್ಲ. ಅದಕ್ಕೂ ಒಂದು ಕಾರಣವಿದೆ ಸಂವಿಧಾನದ ಭಾಗ 3ರ ಅಡಿಯಲ್ಲಿ ವಿಧಿ 25ರಿಂದ 28ರ ತನಕ ಧಾಮಿ೯ಕ ಹಕ್ಕಿನ ಇತಿ ಮಿತಿ ವಿಸ್ತರತೆಯ ಬಗ್ಗೆ ಚೆನ್ನಾಗಿ ವಿವರಿಸಲಾಗಿತ್ತು. ಆದರೆ ಇದನ್ನು ಅರ್ಥ ಮಾಡಿಕೊಳ್ಳಲಾರದ ಮುಂದಿನ ನಮ್ಮನಾಳಿದ ಸರ್ಕಾರ 1976ರಲ್ಲಿ 42ನೇ ತಿದ್ದುಪಡಿ ತರುವುದರ ಮೂಲಕ ಸಂವಿಧಾನದ ಪ್ರಸ್ತಾವನೆ ಭಾಗದಲ್ಲಿ ಜಾತ್ಯತೀತ ಅನ್ನುವ ಪದವನ್ನು ಸೇರಿಸಿ ಬಿಟ್ಟರು. ಮಾತ್ರವಲ್ಲ ಸೇರಿಸಿದ ಸಂದರ್ಭದ ಕೂಡಾ ರಾಷ್ಟ್ರೀಯ ತುರ್ತು ಪರಿಸ್ಥಿತಿ ಇರುವಾಗ ಸಂಸತ್ತು ಕೂಡಾ ಅವಧಿ ಮೀರಿ ನಡೆಯುತ್ತಿದ್ದು ಸದನ ಕೋಮಾವಸ್ಥೆಯಲ್ಲಿಯೇ ಈ ಜಾತ್ಯತೀತ ಅನ್ನುವ ಪದವನ್ನು ಸೇರಿಸಿ ತಾವು ಜಾತಿ ಧಮ೯ ಮೀರಿದ ಪಕ್ಷದ ನಾಯಕಿ ಅನ್ನುವುದನ್ನು ಬಿಂಬಿಸುವ ನೆಪದಲ್ಲಿ ಜಾತ್ಯತೀತ ಪದವನ್ನು ನಮಗೆ ಧಾರೆ ಎರೆದು ಬಿಟ್ಟರು. ಹಾಗಾಗಿ ಇಂದಿಗೂ ಜಾತ್ಯತೀತ ಪದ ಕೇೂಮಾದ ಸ್ಥಿತಿಯಲ್ಲಿಯೇ ಮಲಗಿದೆ.
ಅಂದಿನಿಂದ ಇಂದಿನವರೆಗೂ ಯಾರಿಗೂ ಅರ್ಥವಾಗದ, ಅರ್ಥವಾದರೂ ಬೇಡವಾದ ಶಬ್ದ ಅಂದರೆ ಅದು "ಜಾತ್ಯತೀತ"
ಸಂವಿಧಾನದ ಧಾರ್ಮಿಕ ಹಕ್ಕಿನಲ್ಲಿಯೆ ನಮ್ಮನಾಳುವ ಸರಕಾರಗಳಿಗೆ ಸ್ವಷ್ಟವಾದ ರೀತಿಯಲ್ಲಿಯೇ ಎಚ್ಚರಿಕೆಯ ಮಾತುಗಳನ್ನು ಹೇಳಿ ಬಿಟ್ಟಿದೆ. ಜಾತಿ ಧಮ೯ ಆಚರಣೆಗಳು ಅವರವರ ವ್ಯಕ್ತಿ ಗತವಾದ ಹಕ್ಕುಗಳೆ ಬಿಟ್ಟರೆ ಅದರಲ್ಲಿ ಸರ್ಕಾರವಾಗಲಿ ಪಕ್ಷಗಳಾಗಲಿ ಮೂಗು ತುರಿಸುವಂತಿಲ್ಲ. ಹೀಗಿದ್ದರೂ ಕೂಡಾ ಅಂದಿನಿಂದ ಇಂದಿನ ತನಕ "ಮತ ಬ್ಯಾಂಕ್" ರಾಜಕೀಯದಲ್ಲಿ ಅಲ್ಪ ಸಂಖ್ಯಾತರು, ಬಹು ಸಂಖ್ಯಾತರು ಅನ್ನುವ ಮಲತಾಯಿ ಧೋರಣೆ ತೇೂರಿಸಿಕೊಂಡು ಜಾತಿ ಧರ್ಮದ ವಿಷ ಬೀಜ ಬಿತ್ತಿಕೊಂಡು ಅಧಿಕಾರ ಹಿಡಿದು ದೇಶದ ಸೌಹಾರ್ದತೆ ಹಾಳು ಮಾಡಿದ್ದು ಯಾರು ಎಲ್ಲಿಂದ ಅನ್ನುವುದನ್ನು ಬಹು ಕಾಲ ಈ ದೇಶ ಆಳಿದ ಪಕ್ಷಗಳು ಮತ್ತೆ ಆತ್ಮ (ಇದ್ದರೆ!) ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಇಂದಿನ ಜಾತಿ ಧಮ೯ಗಳ ವಿಷ ಬೀಜ ಇಷ್ಟೊಂದು ಹೆಮ್ಮರವಾಗಿ ಬೆಳೆಯಲು ಯಾರು ಮೂಲ ಕಾರಣ ಅನ್ನುವುದನ್ನು ಮತ್ತೆ ಮನನ ಮಾಡಬೇಕಾಗಿದೆ. ಪ್ರಾರಂಭದಲ್ಲಿಯೇ ಸವ೯ ಜಾತಿ ಧಮ೯ದವರನ್ನು ಒಂದಾಗಿ ಏಕ ರೂಪದ ಕಾನೂನಿನ ಮೂಲಕ ನಡೆಸಿಕೊಂಡು ಬಂದಿದ್ದರೆ ಇಂದು ಹಿಂದುಗಳ ಹಬ್ಬಕ್ಕೆ ಅನ್ಯ ಧಮಿ೯ಯರು ಬರ ಬಹುದಿತ್ತು. ಹಾಗೇನೆ ಅನ್ಯ ಧಮಿ೯ಯರ ಹಬ್ಬ ಹರಿದಿನಗಳಿಗೆ ಹಿಂದುಗಳು ಹೇೂಗಿ ಪ್ರಸಾದ ಹಿಡಿಯ ಬಹುದಿತ್ತು. ಆದರೆ ಇಂದು ಇದಕ್ಕೆಲ್ಲ ಬ್ರೇಕ್ ಬೀಳುವ ಪರಿಸ್ಥಿತಿ ಬಂದಿದೆ ಅಂದರೆ ಭಾರತೀಯರಾದ ನಮ್ಮನ್ನು ಒಡೆದು ಆಳಿದ ಜಾತ್ಯತೀತ ರೆನ್ನುವ ಸೇೂಗಿನ ಸರ್ಕಾರಗಳೇ ಇದಕ್ಕೆ ಕಾರಣ. ಇವರು ಸರ್ಕಾರ ಕಟ್ಟುವಾಗ/ಬೀಳಿಸುವಾಗ ಅನುಕೂಲಕ್ಕೆ ಬರುವ ಏಕೈಕ ಪದವೆಂದರೆ ಜಾತ್ಯತೀತ.
ಇತ್ತೀಚಿಗೆ ಒಬ್ಬ ಚಿಂತಕ ಬರೆಯುತ್ತಾರೆ, ಅಲ್ಪ ಸಂಖ್ಯಾತರು ತಪ್ಪಿದರೆ ಅದನ್ನು ಸಹಿಸಿಕೊಂಡು ನಡೆಸಿಕೊಂಡು ಹೋಗ ಬೇಕಾದದ್ದು ಬಹು ಸಂಖ್ಯಾತರ ಕತ೯ವ್ಯವಂತೆ. ಆದರೆ ಅದೇ ಚಿಂತಕರಿಗೆ ತಪ್ಪಿ ನಡೆದ ಅಲ್ಪ ಸಂಖ್ಯಾತರಿಗೆ ಬುದ್ಧಿ ಹೇಳುವ ತಾಕತ್ತು ಇಲ್ಲ. ಇಂಥವರ ಮಾತುಗಳನ್ನೇ ಕೇಳಿಕೊಂಡು ನ್ಯಾಯಾಲಯಕ್ಕೂ ಡೋಂಟ್ ಕೇರ್ ಅನ್ನುವ ಮಟ್ಟಿಗೆ ನಾವು ಬೆಳೆದು ನಿಂತಿದ್ದೇವೆ.
ಇತ್ತೀಚಿಗೆ ಇದೇ ಮುಖ ಪುಟದಲ್ಲಿ ಒಬ್ಬರು 1949ರ ಸಂವಿಧಾನದ ಪ್ರಸ್ತಾವನೆಯ ಚಿತ್ರ ಬಿಂಬಿಸಿದ್ದರೆ ಇನ್ನೊಬ್ಬರು 1976ರ ಪ್ರಸ್ತಾವನೆಯ ಮುಖಪುಟದ ಚಿತ್ರ ಬಿಂಬಿಸಿದ್ದರು. ಇದನ್ನು ನೇೂಡಿದ ಇನ್ನೊಬ್ಬರಿಗೆ ಏನು ಅಥ೯ವಾಗದೆ. ಇದು ಕಾಪು ಮಾರಿಗುಡಿಯೇ ಎಂದು ಕೈ ಎತ್ತಿದ್ದರು. ಹಾಗಾಗಿ ಒಂದಂತೂ ಗ್ಯಾರಂಟಿ ನಮ್ಮ ಜಾತ್ಯತೀತ ಪದ ಯಾರಿಗೂ ಅಥ೯ವಾಗದ ಆಥ೯ವಾಗ ಬಾರದ ಸಾಂದರ್ಭಿಕವಾಗಿ ಜನಿಸಿದ ಅನಾಥ ಕೂಸು ಅನ್ನುವುದರಲ್ಲಿ ಎರಡು ಮಾತಿಲ್ಲ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment