ಬೆಳ್ತಂಗಡಿ : ಕೆರೆಗೆ ವಿಷ ಹಾಕಿ ಮೀನುಗಳನ್ನು ಕೊಂದ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನಡೆದಿದೆ.
ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆಗೆ ಬಂದು ದುಷ್ಕರ್ಮಿಗಳು ಕೆರೆಗೆ ನಿನ್ನೆ ರಾತ್ರಿ ವಿಷ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಕೆರೆಯ ತುಂಬೆಲ್ಲಾ ಮೀನುಗಳು ಸತ್ತು ತೇಲಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಕೆರೆಯಲ್ಲಿ ಮೀನು ಹಿಡಿಯುವುದನ್ನು ಕುವೆಟ್ಟು ಗ್ರಾಮ ಪಂಚಾಯತ್ ನಿಷೇಧಿಸಿದ್ದು, ಈ ಕಾರಣಕ್ಕೆ ನಿನ್ನೆ ರಾತ್ರಿ ಮೀನು ಹಿಡಿಯಲು ಬಂದವರು ಕೆರೆಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ.
إرسال تعليق