ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ತಂಗಡಿ ; ಕೆರೆಗೆ ವಿಷ ಹಾಕಿ ಮೀನುಗಳನ್ನು ಕೊಂದ ದುಷ್ಕರ್ಮಿಗಳು

ಬೆಳ್ತಂಗಡಿ ; ಕೆರೆಗೆ ವಿಷ ಹಾಕಿ ಮೀನುಗಳನ್ನು ಕೊಂದ ದುಷ್ಕರ್ಮಿಗಳು

 


ಬೆಳ್ತಂಗಡಿ : ಕೆರೆಗೆ ವಿಷ ಹಾಕಿ ಮೀನುಗಳನ್ನು‌ ಕೊಂದ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನಡೆದಿದೆ.

ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆಗೆ ಬಂದು ದುಷ್ಕರ್ಮಿಗಳು ಕೆರೆಗೆ ನಿನ್ನೆ ರಾತ್ರಿ ವಿಷ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಕೆರೆಯ ತುಂಬೆಲ್ಲಾ ಮೀನುಗಳು ಸತ್ತು ತೇಲಾಡುತ್ತಿರುವ ದೃಶ್ಯ ಕಂಡು ಬಂದಿದೆ.

ಕೆರೆಯಲ್ಲಿ ಮೀನು ಹಿಡಿಯುವುದನ್ನು ಕುವೆಟ್ಟು ಗ್ರಾಮ ಪಂಚಾಯತ್ ನಿಷೇಧಿಸಿದ್ದು, ಈ ಕಾರಣಕ್ಕೆ ನಿನ್ನೆ ರಾತ್ರಿ ಮೀನು ಹಿಡಿಯಲು ಬಂದವರು ಕೆರೆಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ.


hit counter

0 Comments

Post a Comment

Post a Comment (0)

Previous Post Next Post