ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಹಿಳಾ ದಿನಾಚರಣೆ ಪ್ರಯುಕ್ತ ಮಾತೃಭಾಷಾ ಕವಿಗೋಷ್ಠಿ ಹಾಗೂ ಸನ್ಮಾನ

ಮಹಿಳಾ ದಿನಾಚರಣೆ ಪ್ರಯುಕ್ತ ಮಾತೃಭಾಷಾ ಕವಿಗೋಷ್ಠಿ ಹಾಗೂ ಸನ್ಮಾನ


ಮಂಗಳೂರು: ಮಾರ್ಚ್ 13ರ ಭಾನುವಾರ ಇಳಿಹಗಲಿನಲ್ಲಿ ಮಂಗಳೂರಿನ ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ರೇಮಂಡ್ ಡಿ ಕುನ್ಹಾ ಸಾರಥ್ಯದಲ್ಲಿ, ಮಹಿಳಾ ದಿನಾಚರಣೆಯ ಪ್ರಯುಕ್ತ ಮಾತೃಭಾಷಾ ಕವಿಗೋಷ್ಠಿ- ಹಾಗೂ ಸಾಧಕ ಸನ್ಮಾನಗಳು ನಡೆಯಲಿವೆ.


ಕವಿಗೋಷ್ಠಿ ಅಧ್ಯಕ್ಷತೆಯನ್ನು ಖ್ಯಾತ ಕವಯಿತ್ರಿ ಸುಶೀಲಾ ಎಸ್ ಎನ್ ಭಟ್ ಪಾತನಡ್ಕ ರವರು ವಹಿಸಲಿದ್ದು, ಸಂದೇಶ ಪ್ರತಿಷ್ಠಾನದ ನಿರ್ದೇಶಕ ರೋಯ್ ಕ್ಯಾಸ್ತಲೀನೋ ಉದ್ಘಾಟಿಸಲಿರುವರು. ಅಂದಿನ ಮುಖ್ಯ ಅತಿಥಿಯರಾಗಿ ಅಭಿಮೊ ಟೆಕ್ನಾಲಜಿ ಸಂಸ್ಥಾಪಕರಾದ ನವೀನ್ ನಾಯಕ್ ಗಾಯಕ ಗಂಗಾಧರ್ ಗಾಂಧಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕ ಪಿ ವಿ‌ ಪ್ರದೀಪ್ ಕುಮಾರ್ ರವರು ಉಪಸ್ಥಿತರಿರುವರು. ನೂರಾರು

ಶೈಕ್ಷಣಿಕ ಕಾರ್ಯಗಳನ್ನು ಆಯೋಜಿಸಿದ ರಾಣಿ ಪುಷ್ಪಲತಾ ದೇವಿ ಅವರಿಗೆ "ಕಲಾ ಕುಸುಮ" ಬಿರುದು ನೀಡಿ ಗೌರವಿಸಲಾಗುವುದು.


ವಿವಿಧ ಮಾತೃ ಭಾಷೆಯ ಸುಮಾರು ಐವತ್ತು ಮಂದಿ ಕವಿಗಳು ಅವರವರ ಮಾತೃ ಭಾಷೆಯಲ್ಲಿ ಕವನ ವಾಚನ ಮಾಡಲಿದ್ದಾರೆ ಎಂದು ಸಂಚಾಲಕರಾದ ಡಾ ಸುರೇಶ್ ನೆಗಳಗುಳಿ ತಿಳಿಸಿರುತ್ತಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post