ಧಾರವಾಡ : ಮದುವೆ ಮನೆಯಲ್ಲಿ ಚಿಕನ್ ಪೀಸ್ ಗಾಗಿ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಒಬ್ಬ ಸಾವನ್ನಪ್ಪಿದ್ದಾನೆ.
ಧಾರವಾಡದ ಪೆಂಡಾರಗಲ್ಲಿ ಬಡಾವಣೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಮದುವೆ ಮನೆಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ.
ಚಿಕನ್ ಪೀಸ್ ಗಾಗಿ ಕಾದಾಡಿದ ಸಾದಿಕ್ ಮತ್ತು ರಿಜ್ವಾನ್ ಗಲಾಟೆಗೆ ಹೋಗಿದ್ದಾರೆ. ಇಬ್ಬರ ಜಗಳದಲ್ಲಿ ಸಾದಿಕ್ ಬಿಟ್ನಾಳ (30) ಎಂಬುವವರು ಸಾವಿಗೀಡಾಗಿದ್ದಾರೆ. ಮೃತ ಸಾದಿಕ್, ಧಾರವಾಡದ ಲಕ್ಷ್ಮಿ ಸಿಂಗನಕೇರಿ ನಿವಾಸಿ.
ಚಿಕನ್ ಪೀಸ್ ಗಾಗಿ ಇಬ್ಬರ ಮಧ್ಯೆ ಜಗಳವಾದಾಗ ಸಾದಿಕ್ ನನ್ನು ರಿಜ್ವಾನ್ ತಳ್ಳಿದ್ದಾನೆ. ಕೆಳಗಡೆ ಬಿದ್ದ ಸಾದಿಕ್ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ.
ದೂರು ನೀಡಲು ಸಾದಿಕ್ ನ ಮನೆಯವರು ಮೊದಲು ಒಪ್ಪಲಿಲ್ಲ. ಆದರೆ ಕೊನೆಗೆ ಧಾರವಾಡ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ರಿಜ್ವಾನನ್ನು ವಶಕ್ಕೆ ಪಡೆದಿದ್ದಾರೆ.
إرسال تعليق