ಚಿಕ್ಕಬಳ್ಳಾಪುರ: ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ನಿಶ್ಚಿತಾರ್ಥ ನಡೆದ ಮೂರೇ ದಿನದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುನಿಕೃಷ್ಣ ಅವರಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಆದರೆ ರಕ್ತದಲ್ಲಿ ತನ್ನ ಪ್ರೇಯಸಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತ ಸ್ತ್ರೀಯೊಬ್ಬರೊಂದಿಗೆ ಮುನಿಕೃಷ್ಣ ಅವರಿಗೆ ಸಂಬಂಧವಿತ್ತು ಎನ್ನಲಾಗಿದೆ.
ಅವರ ಮೊಬೈಲ್ ಪರಿಶೀಲಿಸಿದಾಗ ಅನ್ಯ ಮಹಿಳೆಯೊಂದಿಗಿನ ಸಂಬಂಧ ಬಯಲಾಗಿದೆ. ಸಾವಿಗೆ ಮುನ್ನ ಆಕೆಗೆ ರಕ್ತದಲ್ಲಿ ಪತ್ರ ಬರೆದು ಕ್ಷಮೆ ಕೋರಿದ್ದಾರೆ.
ಬೇರೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಪ್ರೇಯಸಿ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಇದೀಗ ಮುನಿಕೃಷ್ಣ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
إرسال تعليق