ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಹಿಮ್ಮೇಳ ತರಗತಿಗೆ ಚಾಲನೆ ನೀಡಲಾಯಿತು. ಹಿಮ್ಮೇಳ ಗುರುಗಳಾದ, ಪ್ರಸಿದ್ಧ ಯಕ್ಷಗಾನ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಘವ ಬಲ್ಲಾಳ್ ಕಾರಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ತರಗತಿ ಪ್ರಾರಂಭಿಸಿದರು.
ಭಾನುವಾರ ಶ್ರೀ ಮಂದಿರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ, ಗೌರವಾಧ್ಯಕ್ಷ ಬಾಬುಮಣಿಯಾಣಿ ಜಯನಗರ, ರಕ್ಷಾಧಿಕಾರಿಗಳಾದ ಅಚ್ಚುತ ಮಾಸ್ತರ್ ಅಗಲ್ಪಾಡಿ, ರೂಪರಾಜ್ ಪದ್ಮಾರು, ಪ್ರಧಾನ ಕಾರ್ಯದರ್ಶಿ ರಮೇಶ ಕೃಷ್ಣ ಪದ್ಮಾರು, ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ, ಯಾದವ ಸೇವಾಸಂಘದ ಅಧ್ಯಕ್ಷ ಸುಧಾಮ ಪದ್ಮಾರು, ಭಜನಾ ಸಮಿತಿಯ ಅಧ್ಯಕ್ಷ ಸತ್ಯನಾರಾಯಣ ಅಗಲ್ಪಾಡಿ, ಯಾದವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಕಲ್ಲಕಟ್ಟ, ಗುರುರಾಜ ಶರ್ಮ, ದಿವ್ಯ ಆರ್., ಮಾಳವಿಕ ಕಲ್ಲಕಟ್ಟ, ಚಂದ್ರ ಪದ್ಮಾರು, ಸುನಿಲ್ ಕುಮಾರ್ ಬೆದ್ರುಕೂಡ್ಲು, ಕರುಣಾಕರ ಸಿ.ಎಚ್. ಉಪಸ್ಥಿತರಿದ್ದರು. 10ಕ್ಕೂ ಹೆಚ್ಚು ಮಂದಿ ಕಲಾಸಕ್ತ ವಿದ್ಯಾರ್ಥಿಗಳೊಂದಿಗೆ ಪೋಷಕರು ಹಾಗೂ ಊರವರು ಪಾಲ್ಗೊಂಡಿದ್ದರು.
ಯಕ್ಷಗಾನ ಕಲಾವೈಭವದ ರೀತಿಯಂತೆ ನಡೆದ ಪ್ರಾರ್ಥನೆಯಲ್ಲಿ ಭಾಗವತರಾಗಿ ನಿಶ್ಮಿತಾ ರೈ ಬಜ, ಶ್ರೀವರ್ಷ ಕೈಪ್ಪಂಗಳ, ಚೆಂಡೆಯಲ್ಲಿ ನಿರಂಜನ ಬಲ್ಲಾಳ್ ಕಾರಡ್ಕ, ಮದ್ದಳೆಯಲ್ಲಿ ಕೌಶಿಕ್ ಟಿ.ಎಸ್. ಕಾರ್ಯಕ್ರಮಕ್ಕೆ ಮೆರಗನ್ನು ನೀಡಿದರು. ಚೆಂಡೆ, ಮದ್ದಳೆ, ಭಾಗವತಿಕೆ ತರಗತಿಗೆ ಆಸಕ್ತರು 9946533149, 9745414247, 7025244218 ಸಂಪರ್ಕಿಸಬಹುದೆಂದು ಸಂಘಟಕರು ವಿನಂತಿಸಿಕೊಂಡಿರುತ್ತಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment