ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ಕವಿ ಪೊಟ್ಟಿಪ್ಪಲ ನಾರಾಯಣ ಭಟ್ ಇನ್ನಿಲ್ಲ

ಹಿರಿಯ ಕವಿ ಪೊಟ್ಟಿಪ್ಪಲ ನಾರಾಯಣ ಭಟ್ ಇನ್ನಿಲ್ಲ


ಬದಿಯಡ್ಕ: ಹಿರಿಯ ಕವಿ ಪೊಟ್ಟಿಪ್ಪಲ ನಾರಾಯಣ ಭಟ್ (82) ವಯೋಸಹಜವಾಗಿ ಅಲ್ಪ ಕಾಲದ ಅಸೌಖ್ಯದಿಂದ ಎಡನೀರು ಬಳಿಯ ನೆಲ್ಲಿಕಟ್ಟೆಯಲ್ಲಿ ಪುತ್ರನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.


ಕವಿಯಾಗಿ, ಸಂಘಟಕರಾಗಿ ಕಳೆದ ಆರು ದಶಕಗಳಿಂದ ಕಾಸರಗೋಡು ಜಿಲ್ಲೆಯಲ್ಲಿ ಜನಪ್ರಿಯರಾಗಿದ್ದ ಅವರಿಗೆ ಇತ್ತೀಚೆಗಷ್ಟೇ ಸೊಸೆ, ವೈದ್ಯೆ ವಾಣಿಶ್ರೀ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು.


ನೂರಾರು ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಸ್ವರಚಿತ ಕವಿತೆ ಮತ್ತು ತನ್ನ ಉಚ್ಚಕಂಠದ ಗಾಯನದಿಂದ ಪ್ರಸಿದ್ಧರಾಗಿದ್ದ ಅವರು ಯುವ ತಲೆಮಾರಿನ ಹಲವಾರು ಕವಿ ಲೇಖಕರಿಗೆ ಮಾರ್ಗದರ್ಶಕರಾಗಿದ್ದರು. ನಮನ ಎಂಬಿತ್ಯಾದಿ ಮೂರು ಕವನ ಸಂಕಲನ ಪ್ರಕಟಿಸಿದ್ದರಲ್ಲದೆ ಇತರ ಹಲವಾರು ಸಂಗ್ರಹಗಳಲ್ಲಿ ಅವರ ಕವನಗಳು ಸೇರ್ಪಡೆಗೊಂಡಿವೆ. ಕಾಸರಗೋಡಿನ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ಅನಾರೋಗ್ಯದಿಂದಾಗಿ ಪೊಟ್ಟಿಪ್ಪಲದ ಸ್ವಗೃಹದಿಂದ ನೆಲ್ಲಿಕಟ್ಟೆಯಲ್ಲಿ ಪುತ್ರ ಹಾಗೂ ಸೊಸೆ ನಡೆಸುತ್ತಿದ್ದ  ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದರು.


ಮೂರು ದಶಕಗಳ ಹಿಂದೆ ಪೊಟ್ಟಿಪ್ಪಲದಲ್ಲಿ ಶ್ರೀ ಸತ್ಯನಾರಾಯಣ ಭಜನಾ ಸಂಘ ಸ್ಥಾಪಿಸಿ ಪರಿಸರದಲ್ಲಿ ಸಾಮಾಜಿಕ ಧಾರ್ಮಿಕ ಪುನಶ್ಚೇತನಕ್ಕಾಗಿ ಶ್ರಮಿಸುತ್ತ ಬಂದಿದ್ದರು. ನಾರಾಯಣ ಭಟ್ ನಿಧನಕ್ಕೆ ಹಲವಾರು ಮಂದಿ ಗಣ್ಯರು ಕಂಬನಿ ಮಿಡಿದಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post