ಕೇರಳ: ವಿವಾಹಿತ ಸ್ನೇಹಿತನೊಂದಿಗೆ ಹೋಟೆಲ್ನಲ್ಲಿ ತಂಗಿದ್ದ, 24 ವರ್ಷದ ಯುವತಿ ಶವವಾಗಿ ಪತ್ತೆಯಾಗಿರುವ ಘಟನೆಯೊಂದು ಕೇರಳದ ತಿರುವನಂತಪುರಂನ ತಂಪನೂರಿನಲ್ಲಿ ನಡೆದಿದೆ.
ನಿಗೂಢವಾಗಿ ಮೃತಪಟ್ಟ ಯುವತಿ ಕಟ್ಟಕ್ಕಡ ಸಮೀಪದ ವೀರನಕಾವು ನಿವಾಸಿ ಗಾಯತ್ರಿ ಎಂದು ಗುರುತಿಸಲಾಗಿದ್ದು, ಆಕೆಯ ಜೊತೆಗಿದ್ದ ಪರವೂರು ಮೂಲದ ಪ್ರವೀಣ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೋಟೆಲ್ ಸಿಬ್ಬಂದಿಯ ಪ್ರಕಾರ, ಶನಿವಾರ ಮಧ್ಯಾಹ್ನ ತಂಪನೂರಿನ ಚೋಳ ಸಾಮ್ರಾಟ್ ಹೋಟೆಲ್ನಲ್ಲಿ ಇಬ್ಬರು ರೂಮ್ ಮಾಡಿಕೊಂಡಿದ್ದರು. ಸಂಜೆ ವೇಳೆಗೆ ಕೊಠಡಿಗೆ ಬೀಗ ಹಾಕಿ ಹೋದ ಪ್ರವೀಣ್ ವಾಪಸ್ ಬಂದಿರಲಿಲ್ಲ.
ಬೆಳಗಿನ ಜಾವ ಹೋಟೆಲ್ ಸಿಬ್ಬಂದಿಗೆ ಕರೆ ಮಾಡಿದ ಪ್ರವೀಣ್, ಮಧ್ಯರಾತ್ರಿ ವೇಳೆಗೆ ತನ್ನ ಗೆಳತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾನೆ.
ಹೋಟೆಲ್ ಸಿಬ್ಬಂದಿ ತಕ್ಷಣ ಕೊಠಡಿಯನ್ನು ಪರಿಶೀಲಿಸಿದಾಗ ಬಾಯಿಂದ ನೊರೆ ಬಂದು ಮಹಿಳೆ ಸಾವನ್ನಪ್ಪಿರುವುದು ಕಂಡುಬಂದಿದೆ.
ಇದೀಗ ಪ್ರವೀಣ್ ಬಂಧಿಸಿರು ಪೊಲೀಸರು, ವಿಚಾರಣೆಗೊಳಪಡಿಸಿದ್ದಾರೆ.
Post a Comment