ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಏ.10: ಮಂಗಳೂರಿನಲ್ಲಿ ಯುಗಾದಿ ಕವಿಗೋಷ್ಠಿ ಮತ್ತು ಸಾಧಕ ಸನ್ಮಾನ

ಏ.10: ಮಂಗಳೂರಿನಲ್ಲಿ ಯುಗಾದಿ ಕವಿಗೋಷ್ಠಿ ಮತ್ತು ಸಾಧಕ ಸನ್ಮಾನ


ಮಂಗಳೂರು: ಇಲ್ಲಿನ ಪಿಂಗಾರ ಸಾಹಿತ್ಯ ಬಳಗದ ವತಿಯಿಂದ ರೇಮಂಡ್ ಡಿಕೂನ ಸಾರಥ್ಯದಲ್ಲಿ ಮತ್ತು ಡಾ ಸುರೇಶ್ ನೆಗಳಗುಳಿ ಸಾಂಗತ್ಯದಲ್ಲಿ ಇದೇ ಬರುವ ಏಪ್ರಿಲ್ 10 ನೇ ತಾರೀಖಿನಂದು ಸಂದೇಶ ಪ್ರತಿಷ್ಠಾನದ ಸಭಾಂಗಣದಲ್ಲಿ ಯುಗಾದಿ ಕವಿಗೋಷ್ಠಿ‌ ನಡೆಯಲಿದೆ.

ಇದೇ ವೇಳೆ ಡಾ ಸುರೇಶ ನೆಗಳಗುಳಿ ರಚಿತ ಧೀರತಮ್ಮನ‌ ಕಬ್ಬ ಮುಕ್ತಕದ ವಿಮರ್ಶೆ ಹಾಗೂ ನೂತನ ಕೃತಿ‌ ಚುಟುಕು ಭೋಜನ‌ ಸಂಕಲನದ ಬಿಡುಗಡೆಯೂ ನಡೆಯಲಿದ್ದು ಖ್ಯಾತ ವಿಮರ್ಶಕ‌ ಅರವಿಂದ ಚೊಕ್ಕಾಡಿಯವರು ನೆರವೇರಿಸುವರು.

ಸಂಜೆ 3 ಗಂಟೆಗೆ ನಡೆಯಲಿರುವ ಈ ಸಮಾರಂಭದಲ್ಲಿ ಸಾಧಕ ಸನ್ಮಾನವೂ ನಡೆಯಲಿದೆ. ಸರ್ವರಿಗೂ ಕಾರ್ಯಕ್ರಮ ಸಂಘಟಕರು ಈ ಮೂಲಕ ಆಹ್ವಾನ ನೀಡಿರುತ್ತಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post