ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತುಂಗಾ ನದಿಯಲ್ಲಿ ಎರಡು ಮೃತದೇಹಗಳು ಪತ್ತೆ

ತುಂಗಾ ನದಿಯಲ್ಲಿ ಎರಡು ಮೃತದೇಹಗಳು ಪತ್ತೆ

 


ಶಿವಮೊಗ್ಗ: ತುಂಗಾ ನದಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದೆ. ಈ ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲ್ಲೇಶ್ವರ ನಗರದ ಶ್ರೀ ಮಾಸ್ತಾಂಬಿಕ ದೇವಿ ದೇವಸ್ಥಾನದ ಹಿಂಭಾಗ ತುಂಗಾ ನದಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.

ಮಹಿಳೆ ಮತ್ತು ಪುರುಷನ ಮೃತದೇಹಗಳು ಅಕ್ಕಪಕ್ಕದಲ್ಲಿರುವುದು ಕಂಡು ಬಂದಿದೆ. ಮಹಿಳೆಯ ಮೃತದೇಹದ ಮೇಲೆ ಹಸಿರು ಸೀರೆ ಇದೆ. ಪುರುಷನ ಮೃತದೇಹದ ಮೇಲೆ ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಇದೆ ಎಂದು ತಿಳಿದು ಬಂದಿದೆ.

ಮೃತರ ಗುರುತು ಪತ್ತೆಯಾಗಿಲ್ಲ. ಮೃತದೇಹಗಳನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೋಟೆ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


hit counter

0 تعليقات

إرسال تعليق

Post a Comment (0)

أحدث أقدم