ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳಾದೇವಿ ದೇವಸ್ಥಾನದ ಮಾರ್ಗಸೂಚಿ ತುಳು ನಾಮಫಲಕ ಉದ್ಘಾಟನೆ

ಮಂಗಳಾದೇವಿ ದೇವಸ್ಥಾನದ ಮಾರ್ಗಸೂಚಿ ತುಳು ನಾಮಫಲಕ ಉದ್ಘಾಟನೆ



ಮಂಗಳೂರು: ನಗರದ ಸುಪ್ರಸಿದ್ಧ ಮಂಗಳಾದೇವಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ತುಳು ಲಿಪಿಯ ನಾಮಫಲಕವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು.


ಈ ವೇಳೆ ಮಾತನಾಡಿದ ಶಾಸಕ ಕಾಮತ್, ಕೆಲವು ಸಮಯದ ಹಿಂದೆ ತುಳು ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಶಿಶ್ಮಿತ ಎನ್ಮುವ ಪುಟ್ಟ ಹುಡುಗಿ ಮಂಗಳದೇವಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತುಳು ಲಿಪಿಯ ನಾಮಫಲಕ ಅಳವಡಿಸುವಂತೆ ಸ್ವತಃ ತಾನೇ ತುಳು ಲಿಪಿಯಲ್ಲಿ ಮನವಿ ಬರೆದು ನೀಡಿದ್ದಳು. ಆಕೆಯ ಕೋರಿಕೆಯಂತೆ ಮಂಗಳಾದೇವಿ ದೇವಸ್ಥಾನ ರಸ್ತೆಗೆ ತುಳುವೆರ್ ಕುಡ್ಲ‌ ಸಂಘಟನೆಯ ಸಹಯೋಗದೊಂದಿಗೆ ನಾಮಫಲಕ ಅಳವಡಿಸಿ ಇಂದು ಶಿಶ್ಮಿತಾಳ ಕೈಯಲ್ಲಿ ಉದ್ಘಾಟಿಸಿದ್ದೇವೆ ಎಂದರು.  


ತುಳು ಭಾಷೆಗೆ ಮಾನ್ಯತೆ ನೀಡುವ ಕುರಿತು ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ತುಳು ಲಿಪಿಯ ಕುರಿತು ಸಾಕಷ್ಟು ಪ್ರಮಾಣದಲ್ಲಿ ಪ್ರಚಾರ ನೀಡುವ ಅವಶ್ಯಕತೆ ಇರುವ ಕಾರಣ ಇಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡುತಿದ್ದೇವೆ. ತುಳುಲಿಪಿಯ ಬಳಕೆ ಹೆಚ್ಚಾದಂತೆ ಭಾಷೆಯ ಉಳಿವಿಗೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ ಎಂದು ಹೇಳಿದರು. 


ಈ ಸಂದರ್ಭದಲ್ಲಿ ಪಾಲಿಕೆ ನಾಮ ನಿರ್ದೇಶಿತ ಸದಸ್ಯರಾದ ರಮೇಶ್ ಕಂಡೆಟ್ಟು, ತುಳುವೆರ್ ಕುಡ್ಲ‌ ಸಂಘಟನೆಯ ಪ್ರಮುಖರಾದ ಪ್ರತೀಕ್ ಪೂಜಾರಿ, ಸಂತೋಷ್ ಕುಮಾರ್, ರೋಷನ್ ರೊನಾಲ್ಡ್, ಅಕ್ಷಯ್ ಪೇಜಾವರ, ಚರಿತ್ ಪೂಜಾರಿ, ಜಯರಾಮ್ ಎಚ್, ಪ್ರತೀಕ್ ರಾವ್, ಪವನ್ ಕುಮಾರ್, ಸುಳೀಲ್ ಪಾಲನ್ನ, ದೀಕ್ಷಿತ್ ಬಿ, ವರುಣ್, ಯಾದವ್ ಕೋಟ್ಯಾನ್, ಅರ್ಜುನ್ ಬೋಳಾರ್, ಕದ್ರಿ ಕ್ರಿಕೇಟರ್ಸ್ ಪ್ರಮುಖರಾದ ಜಗದೀಶ್ ಕದ್ರಿ, ಆದಿತ್ಯ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post