ಸಾಂದರ್ಭಿಕ ಚಿತ್ರ
ನನಗೆ ಬಹುದಿನದಿಂದ ಒಂದು ಅಧ್ಯಯನ ಆಸಕ್ತಿ ಇತ್ತು. ಉಡುಪಿ ನಗರದಲ್ಲಿ ಯಾವ ಜಾತಿ ಮತ ಧರ್ಮದವರು ಯಾರು ಯಾವ ವೃತ್ತಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ ಅನ್ನುವುದನ್ನು ಮೇಲ್ನೋಟಕ್ಕೊಂದು ಸಮೀಕ್ಷೆ ಬೇಕಾಗಿತ್ತು. ಆದರೆ ಅದಕ್ಕಾಗಿ ನಾನು ಅವರ ಅಂಗಡಿಗಳ ನಾಮಫಲಕಗಳನ್ನು ನೋಡಿ ತಿಳಿಯ ಬೇಕಿತ್ತು. ಆದರೆ ಕೆಲವರ ಅಂಗಡಿಯ ನಾಮ ಫಲಕಗಳ ಹೆಸರಿನಲ್ಲಿ ಜಾತಿ ಧರ್ಮ ತಿಳಿದುಕೊಳ್ಳಲು ಸಾಧ್ಯನೇ ಇಲ್ಲ. ಹಾಗಂತ ಅವರ ಹತ್ತಿರ ಹೇೂಗಿ ನಿಮ್ಮ ಜಾತಿ ಧರ್ಮ ಕೇಳುವುದು ಸರಿ ಅಲ್ಲ. ಆದ್ರೆ ಇವತ್ತು ನಾನು ನಗರಕ್ಕೊಂದು ಪ್ರದಕ್ಷಿಣೆ ಮಾಡಿ ಬಂದಾಗ ಸುಮಾರು 75% ನನ್ನ ಅಧ್ಯಯನಕ್ಕೆ ಬೇಕಾಗುವ ಮಾಹಿತಿ ಸಿಕ್ಕಿತು. ಇಂದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮಾಹಿತಿ ಅಧ್ಯಯನಕ್ಕೆ ಅನುಕೂಲ ಮಾಡಿಕೊಟ್ಟ ನಮ್ಮೆಲ್ಲ ವ್ಯಾಪಾರಸ್ಥರಿಗೆ ಮೊದಲಾಗಿ ನನ್ನ ವೈಯಕ್ತಿಕ ನೆಲೆಯಲ್ಲಿ ಕೃತಜ್ಞತೆಗಳು.
ಇಂದು ಉಡುಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದ್ ಆದ ಅಂಗಡಿಗಳಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವುದು ಚಪ್ಪಲಿ ಅಂಗಡಿಗಳು, ಎರಡನೇ ಸ್ಥಾನದಲ್ಲಿ ನಿಲ್ಲುವುದು ತರಕಾರಿ ಹಣ್ಣಿನ ಅಂಗಡಿಗಳು. ಫ್ಯಾನ್ಸಿ ಆಂಗಡಿಗಳು.
ಗುಜರಿ ಸಂಗ್ರಹದ ಅಂಗಡಿಗಳು. ಸ್ವಲ್ಪ ಮಟ್ಟಿಗೆ ಹಾರ್ಡ್‌ವೇರ್ ಶಾಪ್‌ಗಳು, ಆದರೆ ಎಲ್ಲಿಯೂ ಕೂಡಾ ಪುಸ್ತಕದ ಅಂಗಡಿಗಳಾಗಲಿ, ಔಷಧಿ ಅಂಗಡಿಗಳಾಗಲಿ, ವಸ್ತ್ರದ ಅಂಗಡಿಗಳಾಗಲಿ, ಹಾಲಿನ ಅಂಗಡಿಗಳಾಗಲಿ ಬಂದ್ ಆಗಿರುವುದು ಕಾಣಲೇ ಇಲ್ಲ. (ಅಂದರೆ ೦%)
ಒಟ್ಟಾರೆ ಇಂದಿನ ಮಾರುಕಟ್ಟೆಯ ಅಧ್ಯಯನ ಜಾತಿ ಧರ್ಮ ವೃತ್ತಿ ಅಧ್ಯಯನಕ್ಕೆ ಬೇಕಾಗುವ ಸ್ವಲ್ಪ ಮಾಹಿತಿ ನೀಡಿದೆ. ಮುಂದಿನ ದಿನಗಳಲ್ಲಿ ಹೀಗೆ ಒಂದೊಂದು ಜಾತಿ ಧರ್ಮದವರು ತಮ್ಮ ನೇೂವು ನಲಿವುಗಳನ್ನು ಜಗತ್ತಿಗೆ ತೇೂರಿಸುವ ದೃಷ್ಟಿಯಿಂದ ತಮ್ಮ ಅಂಗಡಿ ಮುಂಗಟ್ಟು ಬಂದ್ ಮಾಡಿದರೆ ನನ್ನಂತಹ ಅಧ್ಯಯನ ಶೀಲ ಸಂಶೋಧಕರಿಗೆ ತುಂಬಾ ಸಹಕಾರಿಯಾಗುತ್ತದೆ. ಸ್ನೇಹಿತರೇ, ದಯಮಾಡಿ ಒಂದೆರಡು ದಿನ ಮುಂಚಿತವಾಗಿ ತಿಳಿಸಿ. ನಮ್ಮ ಅಧ್ಯಯನ ತಂಡದ ತಿರುಗಾಟಕ್ಕೆ ತುಂಬಾ ಅನುಕೂಲವಾಗುತ್ತದೆ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق