ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊಂಡೋತ್ಸವ ನೋಡುತ್ತಿದ್ದ ವೇಳೆ ಮನೆ ಮೇಲ್ಭಾಗ ಕುಸಿದು, ಮಹಿಳೆ ಸಾವು, 40 ಮಂದಿಗೆ ಗಾಯ

ಕೊಂಡೋತ್ಸವ ನೋಡುತ್ತಿದ್ದ ವೇಳೆ ಮನೆ ಮೇಲ್ಭಾಗ ಕುಸಿದು, ಮಹಿಳೆ ಸಾವು, 40 ಮಂದಿಗೆ ಗಾಯ

 


ಮಂಡ್ಯ: ಬೆಳಗ್ಗಿನ ಜಾವ ಮನೆ ತಾರಸಿ ಕುಸಿದ ದುರಂತ ಮಂಡ್ಯದಲ್ಲಿ ಸಂಭವಿಸಿದೆ. ಈ ದುರಂತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 40 ಜನರು ಗಾಯಗೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಇಂದು ಬೆಳಿಗ್ಗೆ ಬಸವೇಶ್ವರ ದೇವಸ್ಥಾನ ಕೊಂಡೋತ್ಸವ ನಡೆದಿತ್ತು.

ಅದನ್ನು ನೋಡಲು ಮಾದೇಗೌಡರ ತಾರಸಿಗೆ 100 ಕ್ಕೂ ಹೆಚ್ಚು ಜನರು ಏರಿದ್ದರು. ಈ ವೇಳೆ 90 ವರ್ಷದ ಹಳೆಯದಾದ ಆ ಕಟ್ಟಡ ಕುಸಿದ ಪರಿಣಾಮವಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ಘಟನೆಯಲ್ಲಿ ಅದೇ ಗ್ರಾಮದ ಪುಟ್ಟಲಿಂಗಮ್ಮ(50) ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, 10 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 40 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post