ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಸ್ತೆ ಅಪಘಾತ; 5 ಮಂದಿ ಸಾವು, ಇಬ್ಬರಿಗೆ ಗಾಯ

ರಸ್ತೆ ಅಪಘಾತ; 5 ಮಂದಿ ಸಾವು, ಇಬ್ಬರಿಗೆ ಗಾಯ

 


ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಸಾಂಬಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಯಿಂದ ಆಳವಾದ ಕಮರಿಗೆ ಉರುಳಿ ಬಿದ್ದ ಪರಿಣಾಮ ಐದು ಮಂದಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆಯೊಂದು ವರದಿಯಾಗಿದೆ.

ಸಾಂಬಾದಿಂದ ಶ್ರೀನಗರಕ್ಕೆ ಹೋಗುತ್ತಿದ್ದ ಕಾರಿನಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು. 

ಸಾಂಬಾ ಜಿಲ್ಲೆಯ ಮನ್ಸಾರ್ ಬಳಿಯ ಜಮೋದಾ ನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಮರಿಗೆ ಉರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಐದು ದೇಹಗಳನ್ನು ಕಮರಿಯಿಂದ ಹೊರತೆಗೆದ್ದಿದ್ದಾರೆ. ಇನ್ನೋರ್ವ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ.

ಮೃತರನ್ನು ಗುಲ್ಜಾರ್ ಅಹ್ಮದ್ ಭಟ್ (71), ಪತ್ನಿ ಜೈನಾ ಬೇಗಂ (65), ಮಗ ಇಕ್ಬಾಲ್ ಅಹ್ಮದ್ ಭಟ್ (25) ಮಗಳು ಮಸರತ್ ಜಾನ್ (21) ಎಂದು ಗುರುತಿಸಲಾಗಿದೆ.

ಚಾಲಕನನ್ನು ಅನಂತನಾಗ್ ನಿವಾಸಿ ಸಾಕಿಬ್ ಎಂದು ಗುರುತಿಸಲಾಗಿದೆ.

hit counter

0 Comments

Post a Comment

Post a Comment (0)

Previous Post Next Post