ಪುತ್ತೂರು: ಉರಿಮಜಲು ಮನೆತನದ ಹಿರಿಯರಾದ ಡಾ. ಕೆ. ನಾರಾಯಣ ಭಟ್ಟ ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಕಳೆದ ಶುಕ್ರವಾರ (ಮಾ.25) ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಅವರು ಸುಮಾರು 40 ವರ್ಷಗಳ ಕಾಲ ಪುತ್ತೂರಿನಲ್ಲಿ ದಂತವೈದ್ಯರಾಗಿ ಜನಾನುರಾಗಿಯಾಗಿದ್ದರು. ಹಲವು ವರ್ಷಗಳ ಕಾಲ ಕನ್ಯಾನದ ಭಾರತ ಸೇವಾಶ್ರಮ, ಅಳಿಕೆಯ ಸತ್ಯಸಾಯಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಹಾಗೂ ಪುತ್ತೂರಿನ ರಾಮಕೃಷ್ಣಾಶ್ರಮದ ಬಡವರಿಗೆ ಉಚಿತವಾಗಿ ದಂತ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದ್ದರು. ಅನೇಕ ದಂತ ವೈದ್ಯಕೀಯ ಶಿಬಿರದ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇಡ್ಕಿದು ಗ್ರಾಮದ ಹಲವು ಭಜನಾ ಮಂದಿರ ಮತ್ತು ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಕೊಡುಗೈ ದಾನಿಯಾಗಿದ್ದರು. ಇಡ್ಕಿದು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಹಲವಾರು ಬಂಧು ಬಾಂಧವರನ್ನು ಅಗಲಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق