ಪುತ್ತೂರು: ನರಿಮೊಗರು ಗ್ರಾಮ ಪಂಚಾಯತ್ ಸಮೀಪದ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಮಾ. 27ರ ಆದಿತ್ಯವಾರದಂದು ಸಂಜೆ 4.30 ಗಂಟೆಗೆ ಭಜನೆ ಮತ್ತು ಆಧ್ಯಾತ್ಮಿಕ ಸತ್ಸಂಗ ನಡೆಯಲಿರುವುದು. ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಪೂಜ್ಯ ಸ್ವಾಮೀಜಿ ಶ್ರೀ ವಿವೇಕ ಚೈತನ್ಯಾನಂದ ಜಿ ಮಹಾರಾಜ್ ಇವರು ಸತ್ಸಂಗವನ್ನು ನಡೆಸಿಕೊಡಲಿದ್ದಾರೆ.
ಪ್ರಾಸ್ತಾವಿಕ ನುಡಿಗಳನ್ನು ಡಾ. ಬಂಗಾರಡ್ಕ ಹೇಳಲಿದ್ದಾರೆ. ಶ್ರೀರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ವಿಚಾರಧಾರೆ ಆಧಾರವಾಗಿಟ್ಟುಕೊಂಡು ಸತ್ಸಂಗದ ಪ್ರಾಮುಖ್ಯತೆಯ ಬಗ್ಗೆ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ ಇಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ತಿಳಿಸಿದ್ದಾರೆ.
Post a Comment