ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಗಡಿಮೊಗರು ಸರಕಾರಿ ಶಾಲೆಯ ಕನ್ನಡ ಮಕ್ಕಳಿಗೆ ಪಾಠ ಮಾಡಲು ಮಲಯಾಳಿ ಶಿಕ್ಷಕನ ನೇಮಕ; ಸಾರ್ವಜನಿಕ ಪ್ರತಿಭಟನೆ

ಅಂಗಡಿಮೊಗರು ಸರಕಾರಿ ಶಾಲೆಯ ಕನ್ನಡ ಮಕ್ಕಳಿಗೆ ಪಾಠ ಮಾಡಲು ಮಲಯಾಳಿ ಶಿಕ್ಷಕನ ನೇಮಕ; ಸಾರ್ವಜನಿಕ ಪ್ರತಿಭಟನೆ


ಕುಂಬಳೆ: ಅಂಗಡಿಮೊಗರು ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದ ಭೌತಶಾಸ್ತ್ರ ಅಧ್ಯಾಪಕರ ಹುದ್ದೆಗೆ ಮಲಯಾಳಿ ಅಧ್ಯಾಪಕನ ನೇಮಿಸಿದ ಕೇರಳ ಶಿಕ್ಷಣ ಇಲಾಖೆಯ ಕ್ರಮವನ್ನು ವಿರೋಧಿಸಿ ಪ್ರತಿಭಟಿಸಿ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಶಾಲೆಯ ಶಿಕ್ಷಕ ರಕ್ಷಕ ಸಂಘದ ವತಿಯಿಂದ  ಪ್ರತಿಭಟನೆ ನಡೆಸಲಾಯಿತು.


ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಬಶೀರ್ ಕೊಟ್ಟೂಡಲ್‌, ವಾರ್ಡ್‌ ಸದಸ್ಯೆ ಪ್ರೇಮ ಎಸ್ ರೈ, ಪುತ್ತಿಗೆ ಪಂಚಾಯತ್‌ ಸದಸ್ಯೆ ಅನಿತಾ, ಶಿವಪ್ಪ ರೈ, ರಫೀಕ್‌, ಸತೀಶ್ ರೈ, ತ್ಯಾಂಪಣ್ಣ ರೈ, ರಘುನಾಥ ರೈ, ಶೀನಾ ಎಂ.ಆರ್‌, ಆನಂದ ಎಂ.ಕೆ, ಲೋಚನ್ ಮುಂತಾದವರು ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿದರು. ನೂರಾರು ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.


ಕೇರಳದ ಶಿಕ್ಷಣ ಇಲಾಖೆ ಕೂಡಲೇ ಮಲಯಾಳಿ ಅಧ್ಯಾಪಕರ ನೇಮಕವನ್ನು ಹಿಂಪಡೆದು, ಕನ್ನಡ ಮಾಧ್ಯಮದ ಅಧ್ಯಾಪಕರನ್ನು ನೇಮಿಸಬೇಕೆಂದು ಆಗ್ರಹಿಸಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم