ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ವಾಣಿಶ್ರೀ ಕಾಸರಗೋಡು ಅವರ 'ಪ್ರಕೃತಿ' ಕೃತಿ ಬಿಡುಗಡೆ

ಡಾ. ವಾಣಿಶ್ರೀ ಕಾಸರಗೋಡು ಅವರ 'ಪ್ರಕೃತಿ' ಕೃತಿ ಬಿಡುಗಡೆ



ಕಾಸರಗೋಡು: ಕಾಸರಗೋಡು ಜಿಲ್ಲೆಯ ನೆಲ್ಲಿಕ್ಕಟ್ಟೆಯ ಚೂರಿಪ್ಪಳ್ಳ ಎಂಬಲ್ಲಿರುವ ಪ್ರಕೃತಿ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ವಾಣಿಶ್ರೀ ಕಾಸರಗೋಡು ಇವರ ಸ್ವರಚಿತ "ಪ್ರಕೃತಿ" ಎಂಬ ಕೃತಿ ಬಿಡುಗಡೆ ಕಾರ್ಯಕ್ರಮವು ಫೆ.27ರಂದು ಅವರ ಶ್ರೀಗಿರಿ ನಿವಾಸದಲ್ಲಿ ಜರುಗಿತು.


ಈ ಸಮಾರಂಭದ ಉದ್ಘಾಟನೆಯನ್ನು ಕುಂಟಾರು ರವೀಶ್ ತಂತ್ರಿ ಬಿಜೆಪಿ ಜಿಲ್ಲಾಧ್ಯಕ್ಷರು ಕಾಸರಗೋಡು ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವಿ ಭಟ್ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕ ಇವರು ವಹಿಸಿದರು. ಡಾ. ಶ್ರೀನಿಧಿ ಸರಳಾಯ ವೈದ್ಯರು, ಸಾಹಿತಿ ಇವರು ಕೃತಿಯನ್ನು ಲೋಕಾರ್ಪಣೆ ಮಾಡಿದರು. ರಾಧಾಕೃಷ್ಣ ಕೆ ಉಳಿಯತ್ತಡ್ಕ ಸಾಹಿತಿ ಪತ್ರಕರ್ತ ಇವರು ಕೃತಿ ಪರಿಚಯ ಮಾಡಿದರು. ಈ ಸಮಾರಂಭದಲ್ಲಿ ಐ ವಿ ಭಟ್ ನ್ಯಾಯವಾದಿ ಸಾಹಿತಿ ಹಾಗೂ ಹಿರಿಯ ಸಾಹಿತಿ ಆಶು ಕವಿ ಪೊಟ್ಟಿಪ್ಪಲ ನಾರಾಯಣ ಭಟ್ ಇವರೀರ್ವರಿಗೂ ಗೌರವಾರ್ಪಣೆ ಮಾಡಲಾಯಿತು.


ಡಾ|| ಶೇಖರ್ ಅಜೆಕಾರ್ ಮಾಧ್ಯಮ, ಡಾ. ಸುರೇಶ್ ನೆಗಳಗುಳಿ ವೈದ್ಯಕೀಯ ಮತ್ತು ಸಾಹಿತ್ಯ, ರೆಮಂಡ್ ಡಿಕೂನಾ ಪತ್ರಕರ್ತ, ಇವರನ್ನು ಪ್ರಕೃತಿ ರತ್ನ ಗೌರವ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ವೆಂಕಟ ಕೃಷ್ಣ ಎಡನೀರು, ಪಿ ಎನ್ ಮೂಡಿತ್ತಾಯ, ವಿ.ಬಿ ಕುಳವರ್ಮ, ರಘುನಂದನ್ ಭಟ್ ಇವರೆಲ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ವೆಂಕಟ ಗಿರೀಶ್ ಪೊಟ್ಟಿಪ್ಪಲ ಇವರು ಗಣ್ಯರಿಗೆ ಶಾಲು ಹೊದಿಸಿ ಗೌರವಿಸಿದರು. ಕುಮಾರಿ ಪ್ರಣಮ್ಯ ದೇವಿ ಸೊಗಸಾದ ನಿರೂಪಣೆ ಮಾಡಿದರು ಹಾಗೂ ಗುರುರಾಜ್ ಎಂ ಆರ್ ಕಾಸರಗೋಡು ಇವರು ಧನ್ಯವಾದ ಸಮರ್ಪಣೆ ಮಾಡಿದರು.


ಅನಂತರ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಹಲವಾರು ಕವಿಗಳು ಭಾಗವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಲವಾರು ಗಾಯಕ ಗಾಯಕಿಯರು ತಮ್ಮ ಸುಮಧುರ ಕಂಠ ಸಿರಿಯಿಂದ ಹಾಡಿ ರಂಜಿಸಿದರು. ಇನ್ನು ಹಲವಾರು ಸಾಹಿತ್ಯಭಿಮಾನಿಗಳು, ಹಿತೈಷಿಗಳು ಸ್ನೇಹಿತರು, ಬಂಧು ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಆದರ ಆತಿಥ್ಯ ಸ್ವೀಕರಿಸಿದರು. ಕಾಸರಗೋಡಿನಲ್ಲಿ ಕನ್ನಡ ಭಾಷೆಯ ಆಸ್ತಿತ್ವದ ಬಗ್ಗೆ ವಿಚಾರಗೋಷ್ಠಿ ಜರುಗಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم