ಕರ್ನಾಟಕ ಸರ್ಕಾರ ಭಗವದ್ಗೀತೆಯನ್ನು ಶೈಕ್ಷಣಿಕ ವಿಷಯದಲ್ಲಿ ಅಧ್ಯಯನ ವಿಷಯವಾಗಿ ಅಳವಡಿಸಿ ಕೊಳ್ಳುವ ವಿಚಾರವನ್ನು ಮುಂದಿಟ್ಟ ತಕ್ಷಣವೇ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮುಖಂಡರು ಖಡಕ್ ಆಗಿ ಇದನ್ನು ವಿರೋಧಿಸಿ ಹೇಳಿಕೆಯನ್ನು ನೀಡಿಯೇ ಬಿಟ್ಟರು. ಅಂದರೆ ಬಿಜೆಪಿ ಅವರಿಗೆ ಭಗವದ್ಗೀತೆ ಅಳವಡಿಸುವುದಕ್ಕಿಂತ ಬಹು ನಿರೀಕ್ಷೆಯಲ್ಲಿ ಇದದ್ದು ಈ ಕಾಂಗ್ರೆಸಿಗರ ಹಿಂದುತ್ವ ವಿರೋಧಿ ನಿಲುವನ್ನು ಅನಾವರಣಗೊಳಿಸಬೇಕಿತ್ತು. ಹಾಗಾಗಿ ಈ ಕಾಂಗ್ರೆಸ್‌ನವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನುವುದು ಅವರ ಮುಂದಿನ ಮೊದಲ ಅಜೆಂಡಾವಾಗಿತ್ತು. ಅದಕ್ಕೆ ಸರಿಯಾಗಿ ನಿರೀಕ್ಷಿತ ರೀತಿಯಲ್ಲಿಯೇ ಕಾಂಗ್ರೆಸಿಗರು ಹೇಳಿಕೆಯನ್ನು ನೀಡಿಯೇ ಬಿಟ್ಟರು. ಚುನಾವಣಾ ಪರ್ವಕಾಲದಲ್ಲಿಯೇ ಬಿಜೆಪಿಗರು ತೇೂಡಿದ ಖೆಡ್ಡಕ್ಕೆ ಕಾಂಗ್ರೆಸ್ಸಿನ ದಡ್ಡ ಆನೆಗಳು ಬಿದ್ದಿದ್ದಂತೂ ನೂರಕ್ಕೆ ನೂರು ಸತ್ಯ.
ಭಗವದ್ಗೀತೆ ಪಠ್ಯ ಕ್ರಮವಾಗಿ ಅಳವಡಿಸುವುದರಿಂದ ಬಿಜೆಪಿಗರಿಗೆ ಹೆಚ್ಚು ಮತ ಬರುತ್ತದೆ ಅನ್ನುವುದಕ್ಕಿಂತ ಭಗವದ್ಗೀತೆಯನ್ನು ವಿರೇೂಧಿಸುವ ಮಾತುಗಳಿಂದಲೇ ಹೆಚ್ಚಿನ ಮತ ಬಿಜೆಪಿಗೆ ಹರಿದು ಬರುವ ಸಾಧ್ಯತೆ ಇದೆ ಅನ್ನುವುದನ್ನು ಕಾಂಗ್ರೆಸ್ ಮಂದಿಗಳು ಅಥ೯ ಮಾಡಿಕೊಳ್ಳದೇ ಇರುವುದು ಅವರ ರಾಜಕೀಯ ದಡ್ಡತನಕ್ಕೆ ಇನ್ನೊಂದು ಜೀವಂತ ಸಾಕ್ಷಿ.
ಕಾಂಗ್ರೆಸಿಗರು ಮೌನವಾಗಿ ಇದ್ದಿದ್ದರೆ ಬಿಜೆಪಿಗರು ಭಗವದ್ಗೀತೆ ಸುದ್ದಿಯನ್ನೆ ಮರೆತು ಬಿಡುತ್ತಿದ್ದರೊ ಏನೊ? ಅಂತೂ ಬಿಜೆಪಿ ತೇೂಡಿದ ಖೆಡ್ಡಕ್ಕೆ ಕಾಂಗ್ರೆಸ್ ಬಿದ್ದಾಗಿದೆ. ಹಾಗಾಗಿ ಭಗವದ್ಗೀತೆ ಜೀವಂತವಾಗಿ ಮುಂದುವರಿಯುವುದರಲ್ಲಿ ಸಂಶಯವಿಲ್ಲ.
ಭಗವದ್ಗೀತೆಯ ಜೊತೆಗೆ ಕುರಾನ್ ಬೈಬಲ್ ನ ಅತ್ಯಮೂಲ್ಯವಾದ ಸಾರವನ್ನು ಸೇರಿಸಿ ಬಿಡಿ ಅನ್ನುವ ಜಾತ್ಯತೀತ ನಿಲುವಿನ ಹೇಳಿಕೆಯನ್ನಾದರೂ ಹೇಳಿ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಬಹುದಿತ್ತು.
ಅದನ್ನೂ ಮಾಡಲಿಲ್ಲ ಕಾಂಗ್ರೆಸಿಗರು.
ಭಗವದ್ಗೀತೆ ಅಂದರೆ ಅದು ಈ ನೆಲದ ಪವಿತ್ರವಾದ ಗ್ರಂಥ. ಇದು ಬೇರೆ ದೇಶಗಳಿಂದ ತಂದ ಎರವಲು ಕೃತಿ ಅಲ್ಲ. ನಮ್ಮ ಪರಿಸ್ಥಿತಿ ಏನಾಗಿದೆ ಅಂದರೆ, ವಾಲ್ಮೀಕಿ ಬೇಕು ವಾಲ್ಮೀಕಿ ರಾಮಾಯಣ ಬೇಡ ಅನ್ನುವ ಮನ ಸ್ಥಿತಿ. ನಾವು ಕೌಟಿಲ್ಯನನ್ನು ಮರೆತಿದ್ದೇವೆ. ಕೌಟಿಲ್ಯ ಈ ದೇಶ ಕಂಡ ಒಬ್ಬ ಅಪ್ರತಿಮ ವಿದೇಶಾಂಗ ಶಾಸ್ತ್ರ ತಜ್ಞ. ಆತನ ಮಂಡಲ ಸಿದ್ಧಾಂತ ತೆರಿಗೆ ವಿಧಾನ ಇವತ್ತಿಗೂ ಪ್ರಸ್ತುತ. ಈತನ ಕುರಿತಾಗಿ ಮಾತನಾಡಿದರೆ ಆತ ಪುರೇೂಹಿತಶಾಹಿ ಜಾತಿ, ಏನೇನೋ ಕಥೆ ಕಟ್ಟಿ ಬದಿಗೆ ಸರಿಸಿ ಬಿಡುವುದೇ ನಮ್ಮ ಜಾಯಮಾನ. ಅಂದರೆ ಮಹಾಭಾರತ, ರಾಮಾಯಣದ ಕಥೆಯೂ ಪರಿಸ್ಥಿತಿಯೂ ಅಷ್ಟೇ. ಅಂತೂ ನಮ್ಮ ನೆಲದ ಮಣ್ಣು ನಮಗೆ ಬೇಡ. ಪರಕೀಯರ ಮಣ್ಣಿನ ವಾಸನೆಯೇ ನಮಗೆ ಬೇಕು.
ಯೇೂಗದ ವಿಚಾರ ಬಂದಾಗಲೂ ಅದಕ್ಕೆ ಜಾತಿ ಧಮ೯ದ ಲೇಪನ ಹಾಕಿ ಹೊರಗಿಡುವ ಪ್ರಯತ್ನ ನಡೆಯಿತು. ಆದರೆ ಕೊನೆಗೂ ಇಡಿ ವಿಶ್ವವೇ ಮಣೆ ಹಾಕಿ ವಿಶ್ವ ಯೇೂಗ ದಿನವಾಗಿ ಸ್ವೀಕರಿಸುವ ಸಂದರ್ಭ ಬಂದಾಗ ಬಾಯಿ ಮುಚ್ಚಿ ಕೂತುಕೊಂಡ ಪರಿಸ್ಥಿತಿ ನಮ್ಮದು.
ಅಂತೂ ಚುನಾವಣಾ ಹೊಸ್ತಿಲಲ್ಲಿ ಭಗವದ್ಗೀತೆ ಅನ್ನುವ ಹೆಸರಿನಲ್ಲಿ ಬಿಜೆಪಿ ತೇೂರಿಸಿದ ಖೆಡ್ಡಕ್ಕೆ ಕಾಂಗ್ರೆಸ್ ಬೀಳುವುದು ಶತ ಸಿದ್ದ ಅನ್ನುವ ವಾತಾವರಣ ರಾಜಕೀಯದಲ್ಲಿ ಸೃಷ್ಟಿಯಾಗಿರುವುದಂತೂ ಸತ್ಯ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment