ಮಂಗಳೂರು: ಸಮಯ ಪಾಲನೆ ವಿಚಾರದಲ್ಲಿ ಎರಡು ಬಸ್‌ಗಳನ್ನು ರಸ್ತೆಯಲ್ಲೇ ಅಡ್ಡವಾಗಿ ನಿಲ್ಲಿಸಿ ಪರಸ್ಪರ ಜಗಳವಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಖಾಸಗಿ ಬಸ್ಸುಗಳ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುಣರಾಜ್ ಶೆಟ್ಟಿ, ಸ್ಟೀವನ್ ನೆಲ್ಸನ್ ನೊರೊನ್ಹಾ, ಧನರಾಜ್ ಮತ್ತು ಶರತ್ ನಾಲ್ವರು ಬಂಧಿತರು.
ಲೇಡಿಹಿಲ್ ಬಸ್ ನಿಲ್ದಾಣದ ಬಳಿ ಶುಕ್ರವಾರ ಬಸ್‌ಗಳನ್ನು ಅಡ್ಡವಾಗಿ ಸಿಲ್ಲಿಸಿದ ಬಳಿಕ ಚಾಲಕರು ಮತ್ತು ನಿರ್ವಾಹಕರು ಬೈದಾಡಿಕೊಂಡು ತಳ್ಳಾಡಿದ್ದಾರೆ.
Post a Comment