ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಡಿಕೇರಿ: ಮೇಕೇರಿ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರ ವಿಜಯೋತ್ಸವ

ಮಡಿಕೇರಿ: ಮೇಕೇರಿ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರ ವಿಜಯೋತ್ಸವ


ಮಡಿಕೇರಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಸತತ ಎರಡನೇ ಅವಧಿಗೆ ಬಿಜೆಪಿಗೆ ಅಭೂತಪೂರ್ವ ಜನಾಶೀರ್ವಾದ ದೊರೆತ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮೇಕೇರಿ ಬಿಜೆಪಿ ಶಕ್ತಿಕೇಂದ್ರದ ನೇತೃತ್ವದಲ್ಲಿ ಕಾರ್ಯಕರ್ತರು ಮೇಕೇರಿಯ ದೇವಾಲಯ ಜಂಕ್ಷನ್ ನಲ್ಲಿ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು.


ಈ ಸಂದರ್ಭ ಮಾತನಾಡಿದ ಹಾಕತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಪರ್ಲಕೋಟಿ ಕಾಂತ ಕಾವೇರಪ್ಪ ಅಂದು ಮಹತ್ಮಾಗಾಂಧಿಯವರು ದೇಶದ ಬಗ್ಗೆ ಕಾಳಜಿಯಿಲ್ಲದ ಕಾಂಗ್ರೇಸ್ಸನ್ನು ವಿಸರ್ಜಿಸುವಂತೆ ಸಲಹೆ ನೀಡಿದ್ದರು. ಆದರೆ ಇಂದು ಆ ಕೆಲಸವನ್ನು ಪಂಜಾಬಿನ ಸಿದ್ಧು ಮತ್ತು ಕರ್ನಾಟಕದ ಸಿದ್ಧ ರಂತರವರು ಯಶಸ್ವಿಯಾಗಿ ಮಾಡುತ್ತಿದ್ದಾರೆಂದರು. ದೇಶದಲ್ಲಿನ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಬಿಜೆಪಿ ವಿರುದ್ಧ ಕೆಲಸ ಮಾಡಿದರೂ ಜನಾಭಿಪ್ರಾಯ ಬಿಜೆಪಿ ಪರವಾಗಿ ಮೂಡಲು ಭ್ರಷ್ಟಾಚಾರ ಮುಕ್ತ ಮೋದಿ ಆಡಳಿತವೇ ಕಾರಣವೆಂದರು.


ಇಡೀ ಉತ್ತರ ಪ್ರದೇಶವೇ ಗೂಂಡಾ ರಾಜ್ಯವಾಗಿದ್ದಾಗ ಅದಕ್ಕೆ ಮುಕ್ತಿ ನೀಡಿ ಭಯಮುಕ್ತ ಸಮಾಜ ನಿರ್ಮಾಣ ಮಾಡಿದ ಕೀರ್ತಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಿಗೆ ಸಲ್ಲುತ್ತದೆ. ಅಲ್ಲಿನ ಜನಸಾಮಾನ್ಯರು ನೆಮ್ಮದಿಯ ಬದುಕಿಗಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿ.ಜೆ.ಪಿ.ಯನ್ನು ಎರಡನೇ ಅವಧಿಗೆ ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದ್ದಾರೆ. ಉಳಿದಂತೆ ಉತ್ತರಖಂಡ್, ಗೋವಾ, ಮಣಿಪುರಗಳಲ್ಲೂ ಜನರು ಬಿಜೆಪಿಯ ಆಡಳಿತವನ್ನು ಮೆಚ್ಚಿ ಎರಡನೇ ಅವಧಿಗೆ ಜನಾಭಿಪ್ರಾಯ ನೀಡಿದ್ದಾರೆ. ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದ ಕೇಂದ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಭಾಜಪಾ ಆಡಳಿತವಿರುವ ರಾಜ್ಯಗಳು ದೇಶಕ್ಕೆ ಮಾದರಿಯಾಗಿವೆಯೆಂದರು.


ವಿಜಯೋತ್ಸವದಲ್ಲಿ ಪ್ರಮುಖರಾದ ಕಾಯರ ಬೆಳ್ಯಪ್ಪ, ವೇಲಾಯುಧನ್, ದಾಮೋದರ್, ಶಕ್ತಿಕೇಂದ್ರದ ಪ್ರಮುಖ ಕಿರಣ್, ಅಪ್ಪಣ್ಣ, ವಿಜುಹರೀಶ್, ದರ್ಶನ್, ತೋರೆರ ಜನಾರ್ಧನ, ವಸಂತ, ರಾಜನ್, ಗಣಪತಿ, ರಾಜೇಶ್, ಭೀಮಯ್ಯ, ಶೇಖರ ಮುಂತಾದವರು ಪಾಲ್ಗೊಂಡಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم