ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೀದಿ ದೀಪಗಳ ಅಳವಡಿಕೆ: ಶಾಸಕ ಕಾಮತ್ ಉದ್ಘಾಟನೆ

ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೀದಿ ದೀಪಗಳ ಅಳವಡಿಕೆ: ಶಾಸಕ ಕಾಮತ್ ಉದ್ಘಾಟನೆ



ಮಂಗಳೂರು: ಸ್ಮಾರ್ಟ್ ಸಿಟಿಯಡಿ ರಥಬೀದಿ ವೆಂಕಟರಮಣ ದೇವಸ್ಥಾನದ ರಸ್ತೆ ಹಾಗೂ ರಥಬೀದಿ ಮಹಮ್ಮಾಯಿ ದೇವಸ್ಥಾನ ರಸ್ತೆಗೆ ಬೀದಿ ದೀಪಗಳ ಅಳವಡಿಕೆ ಕಾಮಗಾರಿ ಪೂರ್ಣಗೊಂಡು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. 


ಈ ವೇಳೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ದೇವಸ್ಥಾನಗಳ ರಸ್ತೆಯ ಅಭಿವೃದ್ಧಿ ಹಾಗೂ ಆಧುನಿಕ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇತ್ತೀಚೆಗೆ ಮಂಗಳಾದೇವಿ ದೇವಸ್ಥಾನದ ರಸ್ತೆ ಹಾಗೂ ಬೀದಿ ದೀಪಗಳನ್ನು ಉದ್ಘಾಟಿಸಲಾಗಿದೆ. ಹಾಗೆಯೇ ಮಹಮ್ಮಾಯಿ ದೇವಸ್ಥಾನ ರಸ್ತೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದರು.  


ರಥಬೀದಿ ವೆಂಕಟರಮಣ ದೇವಸ್ಥಾನದಿಂದ ಶರವು ದೇವಸ್ಥಾನ ರಸ್ತೆ ಸಂಪರ್ಕಿಸುವ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಥಬೀದಿಯಲ್ಲಿ ಟೆಂಪಲ್‌ ಸ್ಕ್ವೇರ್ ಪರಿಕಲ್ಪನೆಯೊಂದಿಗೆ ಕ್ಷೇತ್ರದ ‌ಪರಿಸರವನ್ನು ಸ್ಮಾರ್ಟ್ ಆಗಿ ಪರಿವರ್ತಿಸಲಾಗಿದೆ ಎಂದರು. 


ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೋರೇಟರ್ ಪೂರ್ಣಿಮಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೀಲಾವತಿ ಪ್ರಕಾಶ್, ಕಾರ್ಪೊರೇಟರ್ ಶೈಲೇಶ್ ಶೆಟ್ಟಿ , ಉತ್ತರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಮೇಶ್ ಹೆಗ್ಡೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ರಾವ್,  ಮಹಾಮಾಯಿ ದೇವಸ್ಥಾನದ ಪ್ರಮುಖರಾದ ಸುರೇಶ್ ಕಾಮತ್ ಮತ್ತು ಗೋವಿಂದ ಪೈ  ಮತ್ತು 41 ಸೆಂಟ್ರಲ್ ವಾರ್ಡಿನ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮುರಳಿಧರ್ ನಾಯಕ್ ಹಾಗೂ ವಾರ್ಡಿನ  ಬೂತ್ ಅಧ್ಯಕ್ಷರಾದ ದೇವದಾಸ್  ನಾಗರ್ ಮಠ್, ಬಿಜೆಪಿ ಮುಖಂಡರಾದ ವಸಂತ್ ಜೆ ಪೂಜಾರಿ, ಪುಷ್ಪರಾಜ್ ಶೆಟ್ಟಿ, ರಾಜೇಂದ್ರ, ಉಮಾನಾಥ್ ಶೆಟ್ಟಿಗಾರ್, ಸೌಮ್ಯ ರೈ , ಪಿ ಸಿ ಗುರು , ನಮೃತಾ ನಾಗರ ಮಠ್, ಸತೀಶ್ ಮಲ್ಯ ಹಾಗೂ ಕಾರ್ಯಕರ್ತರಾದ ಗಿರೀಶ್, ಗಣೇಶ್ ನಾಯಕ್, ಕೇದಾರ್ ನಾಗರ್ ಮಠ್‌ , ಸ್ಮಿತಾ ಕಾಮತ ಅಮಿತ್ , ಸುರೇಂದ್ರ ಕುಡ್ವ ವಸಂತ್ ಪೂಜಾರಿ, ಸಾಮಾಜಿಕ ಜಾಲತಾಣ ಪ್ರಮುಖರಾದ ನೀಲೇಶ್  ಕಾಮತ್, ಅಶ್ವಿತ್ ಕೊಟ್ಟಾರಿ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post