ಹುಬ್ಬಳ್ಳಿ: ಪತ್ನಿಯನ್ನು ಕೊಂದು ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಧಾರವಾಡ ಹೊರವಲಯದ ಗಣೇಶನಗರದ ಗಳವಿ ದಡ್ಡಿಯಲ್ಲಿ ನಡೆದಿದೆ. ಚಟ್ಟು ಗದಗವಾಲೆ ಹಾಗೂ ಮನೀಷಾ ಮೃತ ದುರ್ದೈವಿಗಳು.
ಗೋವಾದಲ್ಲಿ ಕೆಲಸಕ್ಕೆಂದು ಬಂದಿದ್ದ ದಂಪತಿ ಕಳೆದ ನಾಲ್ಕು ದಿನಗಳ ಹಿಂದೆ ಧಾರವಾಡಕ್ಕೆ ವಾಪಸ್ ಆಗಿದ್ದರು.
ಕಳೆದ ರಾತ್ರಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಪತ್ನಿಯನ್ನು ಭೀಕರವಾಗಿ ಕೊಂದ ಚಟ್ಟು ಗದಗವಾಲೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
إرسال تعليق