ಕೆಜಿಎಫ್: ತುಮಕೂರು ಹೊರವಲಯದ ಕ್ಯಾತ್ಸಂದ್ರ ಸಮೀಪ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕೆಜಿಎಫ್ ಪೊಲೀಸ್ ಜಿಲ್ಲೆಯ ನಾಗರಿಕ ಪೊಲೀಸ್ ಪೇದೆ ಎಸ್.ಆರ್.ಬಾಲಕೃಷ್ಣ (27) ಮೃತಪಟ್ಟಿದ್ದಾರೆ.
ನಗರದ ಉರಿಗಾಂ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಲಕೃಷ್ಣ ಭಾನುವಾರ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಶಕಗಡ ತನ್ನ ಊರಿಗೆ ಹೋಗಿದ್ದರು.
ಸೋಮವಾರ ಕರ್ತವ್ಯಕ್ಕೆ ಹಾಜರಾಗಲು ಕೆಜಿಎಫ್ಗೆ ಬರುತ್ತಿದ್ದಾಗ ಸಾರಿಗೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕ್ಯಾತ್ಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಬಾಲಕೃಷ್ಣ ಅಂತ್ಯಸಂಸ್ಕಾರವನ್ನು ಸ್ವಗ್ರಾಮ ಶಕಗಡದಲ್ಲಿ ಪೊಲೀಸ್ ಇಲಾಖೆ ಗೌರವಗಳೊಂದಿಗೆ ನೆರವೇರಿಸಲಾಯಿತು.
ಉರಿಗಾಂ ಸಿಪಿಐ ವೆಂಕಟರಾಮಪ್ಪ ಹಾಗೂ ನೂರಾರು ಪೊಲೀಸರು ಅಂತಿಮ ದರ್ಶನ ಪಡೆದರು.
إرسال تعليق