ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಾತ್ರೋತ್ಸವದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವೀರ ಕುಣಿತದ ಜೊತೆ ಹೆಜ್ಜೆ

ಜಾತ್ರೋತ್ಸವದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವೀರ ಕುಣಿತದ ಜೊತೆ ಹೆಜ್ಜೆ

 


ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುಟ್ಟೂರಾದ ಸಿದ್ದರಾಮನ ಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ದಲ್ಲಿ ಭಾಗವಹಿಸಿದರು.


ಸಂಧರ್ಭದಲ್ಲಿ ಅವರಿಗೆ ವೀರ ಕುಣಿತದ ಜೊತೆ ಹೆಜ್ಜೆ ಹಾಕುವಂತೆ ಜೊತೆಯಲ್ಲಿದ್ದವರು ಮನವಿ ಮಾಡಿಕೊಂಡರು.

ಸಿದ್ದರಾಮಯ್ಯ ಅವರು ಸುಮ್ಮನೆ ನಸು ನಗುತ್ತಲೇ ಹಿಂದೇಟು ಹಾಕಿದರು.

ಆದರೆ ಸ್ಥಳದಲ್ಲಿದ್ದವರ ಬೇಡಿಕೆ ಹೆಚ್ಚುತ್ತಿದ್ದ ಹಾಗೆ ಮನಸ್ಸು ಮಾಡಿದ ಸಿದ್ದರಾಮಯ್ಯ ಅವರು ತಮ್ಮ ಸ್ನೇಹಿತರ ಜೊತೆ ಹೆಜ್ಜೆ ಹಾಕಿ ನೆರೆದಿದ್ದ ಸಾವಿರಾರು ಮಂದಿಯ ಸಂಭ್ರಮಕ್ಕೆ ಕಾರಣರಾದರು.

  40 ನಿಮಿಷಗಳ ಕಾಲ ಸಿದ್ದರಾಮಯ್ಯ ಅವರು ಡ್ಯಾನ್ಸ್‌ ಮಾಡಿರುವುದು ಇನ್ನೂ ಅಲ್ಲಿ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿದೆ.

0 Comments

Post a Comment

Post a Comment (0)

Previous Post Next Post