ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೋಳಿ ಸಂಭ್ರಮದ ವೇಳೆ ನದಿಗೆ ಸ್ನಾನಕ್ಕೆ ಹೋದ ಐದು ಬಾಲಕರು ನೀರಲ್ಲಿ ಮುಳುಗಿ ಸಾವು

ಹೋಳಿ ಸಂಭ್ರಮದ ವೇಳೆ ನದಿಗೆ ಸ್ನಾನಕ್ಕೆ ಹೋದ ಐದು ಬಾಲಕರು ನೀರಲ್ಲಿ ಮುಳುಗಿ ಸಾವು

 


ದ್ವಾರಕ: ಗುಜರಾತ್‌ನ ದೇವಭೂಮಿ ದ್ವಾರಕ ಜಿಲ್ಲೆಯ ಭನ್ವಾಡ್ ಬಳಿ ಹೋಳಿ ಸಂಭ್ರಮ ಮುಗಿಸಿ ಸ್ನಾನಕ್ಕೆ ಹೋದ ಹದಿಹರೆಯದ ಐದು ಬಾಲಕರು ನದಿಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ನಡೆದಿದೆ.

ಹೋಳಿ ಹಬ್ಬದ ಪ್ರಯುಕ್ತ ಶುಕ್ರವಾರ ಬಣ್ಣದೋಕುಳಿ ಆಡಿದ್ದ ಯುವಕರು ಬಳಿಕ ಸ್ನಾನಕ್ಕೆಂದು ಇಲ್ಲಿನ ತ್ರಿವೇಣಿ ನದಿಗೆ ಹೋಗಿದ್ದರು.

ಆದರೆ ನದಿಯ ಆಳದ ಬಗ್ಗೆ ಗೊತ್ತಿಲ್ಲದೆ ಯುವಕರು ಈಜಲಾಗದೆ ಮುಳುಗಿದ್ದಾರೆ.

ಈ ವೇಳೆ ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ನೆರವಿನಿಂದ ನದಿಯಲ್ಲಿ ಮುಳುಗಿದ್ದ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಭನ್ವಾಡ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ನಿಕುಂಜ್ ಜೋಶಿ ಹೇಳಿದ್ದಾರೆ.


hit counter

0 Comments

Post a Comment

Post a Comment (0)

Previous Post Next Post