ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಚಲನಚಿತ್ರಗಳಲ್ಲಿ ದೇಸೀಯತೆ ಮತ್ತು ಶಾಸ್ತ್ರೀಯ ಸಂಗೀತಗಳ ಸಮ್ಮಿಲನ'

'ಚಲನಚಿತ್ರಗಳಲ್ಲಿ ದೇಸೀಯತೆ ಮತ್ತು ಶಾಸ್ತ್ರೀಯ ಸಂಗೀತಗಳ ಸಮ್ಮಿಲನ'


ಮಂಗಳೂರು: "ಜಗತ್ತಿನ ಸಿನಿಮಾಗಳಲ್ಲಿ ಭಾರತೀಯ ಸಿನಿಮಾ ಗಮನ ಸೆಳೆಯುವುದೇ ತನ್ನ ಸಂಗೀತದಿಂದ. ಕನ್ನಡ ಸಿನಿಮಾಗಳೂ ಇದಕ್ಕೆ ಹೊರತಲ್ಲ. ಚಲನಚಿತ್ರಗಳಲ್ಲಿ ದೇಸೀಯತೆ ಮತ್ತು ಶಾಸ್ತ್ರೀಯ ಸಂಗೀತಗಳನ್ನು ಸಮ್ಮಿಲನಗೊಳಿಸಿಕೊಂಡಿದೆ" ಎಂದು ಮಂಗಳೂರು ಆಕಾಶವಾಣಿ ಕಲಾವಿದ ಖ್ಯಾತ ಸಿತಾರ್ ವಾದಕ ರಫೀಕ್ ಉಸ್ತಾದ್ ಖಾನ್ ಅವರು ಹೇಳಿದರು.


ಅವರು ಕರಾವಳಿ ಲೇಖಕಿಯರ ವಾಚಕಿಯರ ಸಂಘ ಆಯೋಜಿಸಿದ್ದ ಮನಸು ಮಾಗಿದ ಸುಸ್ವರ ರಾಜ್ಯಮಟ್ಟದ ಕನ್ನಡದ ಮೌಲಿಕ ಚಿತ್ರಗೀತೆಗಳ ಕುರಿತು ಮಂಗಳೂರಿನ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.


"ಚಲನಚಿತ್ರ ಗೀತೆಗಳ ಪ್ರಸಾರಕ್ಕಾಗಿ ಇಂದಿನಂತೆ ಸಂಪರ್ಕ ಮಾಧ್ಯಮಗಳಿಲ್ಲದ ಕಾಲದಲ್ಲಿ ಗೀತರಚನೆ ಸಂಗೀತ ನಿರ್ದೇಶನಕ್ಕಾಗಿ ಸುಮಾರು ಹತ್ತು ಹದಿನೈದು ದಿನಗಳ ಬಳಕೆಯಾಗಿ ಹತ್ತು ನಿಮಿಷದ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಆ ಕಾರ್ಯಕ್ರಮ ಸಂಯೋಜನೆ ಮಾಡುವಾಗ ಇದ್ದ ಸಂಕಷ್ಟಗಳು ಬಹಳ. ಸಿನಿಮಾ ಸಂಗೀತವನ್ನು ಸಾಹಿತ್ಯ ವನ್ನು ಜನರಲ್ಲಿಗೆ ಒಯ್ಯುವ ಕೆಲಸವನ್ನು ಈ ಕೃತಿ ಅದ್ಭುತವಾಗಿ ನಡೆಸಿದೆ. ಈ ಧ್ಯಾನಸ್ಥ ಸಾಹಿತ್ಯ ರಚನೆಗೆ ಲೇಖಕಿಗೆ ಅಭಿನಂದನೆಗಳು. ಸಿನಿಮಾ ಸಾಹಿತ್ಯ ಸಂಗೀತವನ್ನು ನೋಡುವ ಮನೋಧರ್ಮ ಇಂದು ಬದಲಾಗಿದೆ" ಎಂದವರು ಅಭಿಪ್ರಾಯ ಪಟ್ಟರು.


ಹಿರಿಯ ಲೇಖಕಿ ಎ.ಪಿ. ಮಾಲತಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 'ಮನಸು ಮಾಗಿದ ಸುಸ್ವರ' ಅಂಕಣ ಕೃತಿಯ ಲೇಖಕಿ ಜ್ಯೋತಿ ಗುರುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕೃತಿರಚನೆಗೆ ಕಾರಣವಾದ ಬಾಲ್ಯದ ನೆನಪು, ಅನುಭವಗಳನ್ನು ಹಂಚಿಕೊಂಡರು.


ಮಂಗಳೂರು ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರಾದ ಜಯಲಕ್ಷ್ಮೀ ಶಾಸ್ತ್ರೀ ಹಾಗೂ ರತ್ನಾವತಿ ಬೈಕಾಡಿ ಅವರು 'ಅಮರ ಮಧುರ' ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಳಿಕ ಖ್ಯಾತ ವಾಗ್ಮಿ, ಲೇಖಕಿ ಡಾ. ಶುಭಾ ಮರವಂತೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮಂಗಳೂರು ಆಕಾಶವಾಣಿಯ ವಿಶ್ರಾಂತ ಹಿರಿಯ ಪ್ರಸಾರಕ ಮುದ್ದು ಮೂಡುಬೆಳ್ಳೆ ಅವರು 'ಚಿತ್ರಗೀತೆಗಳಲ್ಲಿ ಪ್ರೇಮದ ಪರಿಕಲ್ಪನೆ ಮತ್ತು ಸಾಮಾಜಿಕ ಮೌಲ್ಯಗಳು' ಎಂಬ ವಿಷಯದ ಕುರಿತು ಹಾಗೂ ಸುಂಕದಕಟ್ಟೆಯ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಲತಾ ಆರ್ ಕೋಟ್ಯಾನ್ ಅವರು 'ಮೌಲಿಕ ಚಿತ್ರಗೀತೆಗಳ ರಸಗ್ರಹಣ' ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮನಸು ಮಾಗಿದ ಸುಸ್ವರ ಕೃತಿಯಿಂದ ಆಯ್ದ ಚಿತ್ರಗೀತೆಗಳನ್ನು ಹಾಡಿದರು. ಸಂಘದ ಸದಸ್ಯೆಯರು ಹಾಗೂ ವಿದ್ಯಾರ್ಥಿಗಳು ಲೇಖಕಿಯೊಂದಿಗೆ ಮುಕ್ತ ಸಂವಾದದಲ್ಲಿ ಪಾಲ್ಗೊಂಡರು.


ಕರಾವಳಿ ವಾಚಕಿಯರ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳಾಯಿರು ಸ್ವಾಗತಿಸಿ ಪ್ರಸ್ತಾವನೆಗೈದರು. ವಿಜಯಲಕ್ಷ್ಮಿ ಬಿ. ಶೆಟ್ಟಿ ವಂದಿಸಿದರು. ವಾಣಿಶ್ರೀ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post