ಕೊಪ್ಪಳ: ಜಾತ್ರೋತ್ಸವಕ್ಕೆ ಊರಿನ ಹಿರಿಯರದ್ದೋ ಅಥವಾ ರಾಜಕಾರಣಿಗಳ ಫ್ಲೆಕ್ಸ್ ಹಾಕಿ ಸ್ವಾಗತ ಕೋರುವುದನ್ನು ನಾವೆಲ್ಲಾ ಕಂಡಿದ್ದೇವೆ. ಆದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟಿಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಬ್ಯಾನರ್ ಹಾಕಿ ಸ್ವಾಗತ ಕೋರಲಾಗಿದೆ.
ಹಾಬಲಕಟ್ಟಿಯ ಶ್ರೀ ಶರಣಬಸವೇಶ್ವರ ಜಾತ್ರಾ ನಿಮಿತ್ತ ಗ್ರಾಮದಲ್ಲಿ ಸನ್ನಿಲಿಯೊನ್ ಅಭಿಮಾನಿಗಳು ಸ್ವಾಗತ ಕೋರಿದ ಬ್ಯಾನರ್ ಹಾಕಿದ್ದಾರೆ.
ಜಾತ್ರೆ ಪ್ರಯುಕ್ತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ.
ಜಾತ್ರೆ ಹಾಗೂ ವಿವಾಹಕ್ಕೆ ಬರುವ ಜನರನ್ನು ಸನ್ನಿಲಿಯೋನ್ ಹೆಸರಲ್ಲಿ ಬ್ಯಾನರ್ ಹಾಕಿ ಸ್ವಾಗತ ಕೋರಲಾಗಿದೆ.
ಬಹುಭಾಷಾ ನಟಿ ಸನ್ನಿಲಿಯೋನ್ ಭಾರತದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರು ಕೇವಲ ಸಿನಿಮಾದಿಂದ ಮಾತ್ರ ಅಭಿಮಾನಿಗಳನ್ನ ಹೊಂದಿದವರಲ್ಲ.
ಸಿನಿಮಾ ಹೊರತುಪಡಿಸಿ ಸಾಮಾಜಿಕ ಸೇವೆಗಳಿಂದಾಗಿ ಅನೇಕರ ಹೃದಯ ಗೆದ್ದಿದ್ದಾರೆ.
إرسال تعليق