ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ಎರಟಾಡಿ ವಿಷ್ಣುಮೂರ್ತಿ ದೇವರಿಗೆ ನೂತನ ರಥ, ಆವರಣ ಗೋಡೆ ಸಮರ್ಪಣೆ

ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ಎರಟಾಡಿ ವಿಷ್ಣುಮೂರ್ತಿ ದೇವರಿಗೆ ನೂತನ ರಥ, ಆವರಣ ಗೋಡೆ ಸಮರ್ಪಣೆ


ರಾಮಕುಂಜ: ಪದ್ಮವಿಭೂಷಣ ಪುರಸ್ಕೃತ ಹಿರಿಯ ಸಂತ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ದ ಕ‌ ಜಿಲ್ಲೆ ಕಡಬ ತಾಲೂಕು ಹಳೇನೇರಂಕಿ ಗ್ರಾಮದ ಎರಟಾಡಿ ಶ್ರೀ ವಿಷ್ಣುಮೂರ್ತಿ ದೇವರಿಗೆ ನೂತನವಾಗಿ ನಿರ್ಮಿಸಲಾಗಿರುವ ಚಂದ್ರಮಂಡಲ ರಥ ಹಾಗೂ ದೇವಾಲಯಕ್ಕೆ ನಿರ್ಮಿಸಲಾದ ಆವರಣಗೋಡೆ  ಸಮರ್ಪಣೆ ಕಾರ್ಯಕ್ರಮಗಳು ನೆರವೇರಿದವು.


ರಾಜ್ಯ ಮುಜರಾಯಿ ಇಲಾಖೆಯ ಇಪ್ಪತ್ತು ಲಕ್ಷ ರೂ ಅನುದಾನ‌ ಹಾಗೂ ಭಕ್ತರ ನೆರವಿನಿಂದ ಈ ನಿರ್ಮಾಣಗಳು ನಡೆದಿವೆ. 


ಭಾನುವಾರ ಸಂಜೆ ರಾಜ್ಯ ಬಂದರು ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಮಂತ್ರಿ ಎಸ್ ಅಂಗಾರ ಅವರು ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಆಗಮಿಸಿ ಆವರಣಗೋಡೆಯನ್ನು ಉದ್ಘಾಟಿಸಿ, ದೇವರ ದರ್ಶನ‌ ಪಡೆದು ಪ್ರಸಾದ ಸ್ವೀಕರಿಸಿ ದೇವಳದ ಪರಿಸರವನ್ನು ಕಂಡು ಹಾಗೂ ನೂತನ ರಥವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.‌


ಪ್ರಸಿದ್ಧ ಆಗಮ ವಿದ್ವಾಂಸ ಪಂಜ ಭಾಸ್ಕರ ಭಟ್, ದೇವಳದ ಆಡಳಿತ ಮೊಕ್ತೇಸರ ಹರಿನಾರಾಯಣ ಆಚಾರ್ಯ, ಪೇಜಾವರ ಮಠದ ದಿವಾನರಾದ ಎಂ ರಘುರಾಮಾಚಾರ್ಯ, ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಪ್ರಮುಖರಾದ ನಾರಾಯಣ ಭಟ್ ಹಳೇನೇರಂಕಿ ಗ್ರಾ ಪಂ ಅಧ್ಯಕ್ಷೆ ಮಾಲತಿ‌ಕದ್ರ ಮಾಜಿ ತಾ ಪಂ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಮಾಜಿ ಗ್ರಾ ಪಂ ಅಧ್ಯಕ್ಷ ಪ್ರಶಾಂತ್ ಆರ್ ಕೆ, ಗ್ರಾಮ ಲೆಕ್ಕಿಗ  ಶೇಷಾದ್ರಿ,  ದೇವಳದ ಅರ್ಚಕ ಸುಧೀಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. 


ತಾಳ ಹಿಡಿದು ಭಜನೆ ಮಾಡಿದ ಸಚಿವ ಅಂಗಾರ:



ಬಳಿಕ ದೇವಳದ ಆವರಣದಲ್ಲಿ ಯುವಕರು ನಡೆಸುತ್ತಿದ್ದ ಭಜನೆಯಲ್ಲಿ ಪಾಲ್ಗೊಂಡ ಸಚಿವ ಅಂಗಾರ ಸುಮಾರು ಅರ್ಧಘಂಟೆ ತಾವೂ ತಾಳ ಹಿಡಿದು ಭಜನೆಗಳನ್ನು ಹಾಡಿ ಭಕ್ತಿ ಮೆರೆದರು.


ಸೋಮವಾರ ಬೆಳಿಗ್ಗೆ ದೇವರಿಗೆ ವಿಶೇಷ ಶುದ್ಧ ಪ್ರಾಯಶ್ವಿತ್ತ ಹೋಮ ಹಾಗೂ ಕಲಶಾಭಿಷೇಕ ಸಹಿತ ಮಹಾಪೂಜೆಗಳು ಪಂಜ ಭಾಸ್ಕರ ಭಟ್ಟರ ನೇತೃತ್ವದಲ್ಲಿ ನಡೆದವು.  


ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಆಗಮಿಸಿ ನೂತನ ಚಂದ್ರಮಂಡಲರಥವನ್ನು ದೇವರಿಗೆ ಅರ್ಪಿಸಿ ಶಿಲಾಫಲಕ ಅನಾವರಣಗೊಳಿಸಿ, ಭಿಕ್ಷೆ ಗುರುಪೂಜೆ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು.

ನೂರಾರು ಭಕ್ತರು ಆಗಮಿಸಿ ದೇವರ ಪ್ರಸಾದ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ರಾಮಕುಂಜೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಧಾಕೃಷ್ಣ ಕೆ ಎಸ್ ವಿಷ್ಣುಮೂರ್ತಿ ಆಚಾರ್ಯ ಕೃಷ್ಣ ಭಟ್, ವಾಸುದೇವ ಭಟ್ ಪೆರಂಪಳ್ಳಿ, ಎಸ್ ವಿ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post