ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರು ಮತ್ತು ಬೈಕ್ ಅಪಘಾತ; ದೇವಾಲಯಕ್ಕೆ ಹೊರಟಿದ್ದ ದಂಪತಿಗಳು ಸಾವು

ಕಾರು ಮತ್ತು ಬೈಕ್ ಅಪಘಾತ; ದೇವಾಲಯಕ್ಕೆ ಹೊರಟಿದ್ದ ದಂಪತಿಗಳು ಸಾವು

 


ಚಿಕ್ಕಮಗಳೂರು: ಕಾರು – ಬೈಕ್‌ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿ ಸಾವನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ‌.

ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಏರಿಮೇಲೆ ಘಟನೆ‌ ನಡೆದಿದ್ದು ಕಾರು ಡಿಕ್ಕಿಯಾಗುತ್ತಿದ್ದಂತೆ ಬೈಕ್ ಕಂದಕಕ್ಕೆ ಬಿದ್ದಿದೆ. ಇದರಿಂದಾಗಿ ಬೈಕ್ ಹೊತ್ತಿ ಉರಿದಿದೆ.

ಬೀರೂರು ಕಾರೇಹಳ್ಳಿ ಮೂಲದ ಆನಂದ್ (35 ವ) ಮತ್ತು ಲಕ್ಷ್ಮೀ (33 ವ) ದಂಪತಿ ಮೃತಪಟ್ಟಿದ್ದಾರೆ. ದಂಪತಿಗಳು ಬೈಕಿನಲ್ಲಿ ಧರ್ಮಸ್ಥಳಕ್ಕೆ ಹೋಗುವಾಗ ಈ ಘಟನೆ‌ ಸಂಭವಿಸಿದೆ.

ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

hit counter

0 تعليقات

إرسال تعليق

Post a Comment (0)

أحدث أقدم