ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೂಡೂದ ಮಾಯ್ಕಾರೆ ತುಳು ಭಕ್ತಿಗೀತೆ ಆಲ್ಬಂ ಬಿಡುಗಡೆ

ಬೂಡೂದ ಮಾಯ್ಕಾರೆ ತುಳು ಭಕ್ತಿಗೀತೆ ಆಲ್ಬಂ ಬಿಡುಗಡೆ

 


ಸುಳ್ಯ: ಬೂಡು ಕೊರಗಜ್ಜ ದೈವ ಕುರಿತ ಬೂಡೂದ ಮಾಯ್ಕಾರೆ ಎಂಬ  ತುಳು ಭಕ್ತಿಗೀತೆ ಆಲ್ಬಮ್  ಬಿಡುಗಡೆ ಕಾರ್ಯಕ್ರಮವು ಬೆಳ್ಳಾರೆಯ ಬೂಡು  ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿ ಯಲ್ಲಿ ಜರುಗಿತು. 

ಸುಳ್ಯದ ಗಾಯಕ ಮತ್ತು ಜ್ಯೋತಿಷಿ ಎಚ್ .ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗಾಯಕ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ರವರು ಪ್ರಾಸ್ತಾವಿಕ ಮಾತಾಡಿದರು. ಅಧ್ಯಕ್ಷತೆ ವಹಿಸಿದ್ದ ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ  ಗರಡಿಯ ಅಧ್ಯಕ್ಷರಾದ ಸುಂದರ್ ತೊಡಿಕಾನ  ಅವರು ಬೂಡುದ ಮಾಯ್ಕಾರೆ ಎಂಬ ತುಳು ಭಕ್ತಿಗೀತೆ ಆಲ್ಬಮ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬ್ರಹ್ಮ ಕಳಸ  ಜೀರ್ಣೋದ್ಧಾರ ಪ್ರಚಾರ ಸಮಿತಿಯ  ಸಂಚಾಲಕರಾದ ಪ್ರೇಮ್ ಸ್ಟುಡಿಯೋ ಬೆಳ್ಳಾರೆರವರು ಮಾತನಾಡಿದರು.

ಗಾಯಕಿ ವಸಂತಿ ಎನ್ಮೂರು, ಗೌರವ ಅಧ್ಯಕ್ಷರಾದ ಕರಿಯ ಬೀಡು, ಖಜಾಂಚಿ ಸಂಜೀವ ಕಲಾಯಿ, ಜೀರ್ಣೋದ್ಧಾರ ಸಮಿತಿಯ ಉಪಕಾರ್ಯದರ್ಶಿ  ಗಣೇಶ್ ಪಾಟಾಜೆ, ಅಣ್ಣು ಪುಡುಕಾಜೆ, ಕುಸುಮ, ಯಶವಂತ್ ಕಲಾಯಿ, ಭಾಗೀರಥಿ ಇನ್ನಿತರರು ಉಪಸ್ಥಿತರಿದ್ದರು.

ಹಾಡನ್ನು ಕಡಬದ ಶಶಿ ಗಿರಿವನ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಮಾಡಲಾಗಿತ್ತು . ಲಕ್ಷ್ಮಣ್ ಪೆರುಮಾಳ್ ಐವರ್ನಾಡು ಮತ್ತು ವಸಂತಿ ರವರು ಜೊತೆಯಲ್ಲಿ ಹಾಡಿದ ಗೀತೆಯ ಸಾಹಿತ್ಯ ರವಿ ಪಾಂಬಾರ್ ಬರೆದಿದ್ದಾರೆ.

ಈ ಗೀತೆ ಯೂ ಟ್ಯೂಬ್ ನಲ್ಲಿ ದೊರೆಯಲಿದೆ. ಬೆಳ್ಳಾರೆಯ ಬೂಡು ಶ್ರೀ ಆದಿನಾಗಬ್ರಹ್ಮ  ಮೊಗೇರ್ಕಳ ಗರಡಿಯ ಕಾರ್ಯದರ್ಶಿ ಶ್ರೀ ವಿಜಯ್ ಪಾಟಾಜೆ ರವರು ವಂದನಾರ್ಪಣೆ ಮಾಡಿದರು.


hit counter

0 Comments

Post a Comment

Post a Comment (0)

Previous Post Next Post