ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬ್ಯಾರಿಕೇಡ್ ಗೆ ಬೈಕ್ ಡಿಕ್ಕಿ; ಸಿವಿಲ್ ಇಂಜಿನಿಯರ್ ಸಾವು

ಬ್ಯಾರಿಕೇಡ್ ಗೆ ಬೈಕ್ ಡಿಕ್ಕಿ; ಸಿವಿಲ್ ಇಂಜಿನಿಯರ್ ಸಾವು

 


ಮಂಗಳೂರು: ಬ್ಯಾರಿಕೇಡ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪ ಬಪ್ಪನಾಡು ಜಂಕ್ಷನ್ ಬಳಿ ನಡೆದಿದೆ.


ಮೃತ ಸವಾರನನ್ನು ಕಡಬ ನಿವಾಸಿ ಮಂಗಳೂರಿನ ಕನ್‌ಸ್ಟ್ರಕ್ಷನ್ ಸಂಸ್ಥೆಯೊಂದರಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಸಚಿನ್ (28) ಎಂದು ಗುರುತಿಸಲಾಗಿದೆ. 


ಸಚಿನ್ ಪಡುಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಬಪ್ಪನಾಡು ಬಳಿ ನಿಯಂತ್ರಣ ತಪ್ಪಿದ ಬೈಕ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

0 تعليقات

إرسال تعليق

Post a Comment (0)

أحدث أقدم