ಮೈಸೂರು: ಜೇಮ್ಸ್ ಸಂಭ್ರಮಾಚರಣೆಯ ವೇಳೆ ಕುಸಿದು ಬಿದ್ದು ಅಪ್ಪು ಅಭಿಮಾನಿ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ. ಹೆಡಿಯಾಲ ಗ್ರಾಮದ ಆಕಾಶ್ (22) ಮೃತ ಪಟ್ಟವನು.
ನಿನ್ನೆ ಹೆಡಿಯಾಲ ಗ್ರಾಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಳಿಕ ಜೇಮ್ಸ್ ಸಂಭ್ರಮಾಚರಣೆ ಕಾರ್ಯಕ್ರಮವಿದ್ದು, ಎಲ್ಲಾ ಸಂಭ್ರಮದಲ್ಲಿ ಭಾಗಿಯಾಗಿದ್ದ ಆಕಾಶ್ ಅದ್ದೂರಿ ಮತ್ತು ಸಡಗರ ಸಂಭ್ರಮದಲ್ಲಿ ಕುಸಿದು ಬಿದ್ದಿದ್ದಾರೆ.
ಕೂಡಲೇ ಆಕಾಶ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಸಾವನ್ನಪ್ಪಿದ್ದಾರೆ.
Post a Comment