ಬೆಳಗಾವಿ : ಮುರಗೋಡ ಶಾಖೆಯ ಬೆಳಗಾವಿ ಡಿಸಿಸಿ ಬ್ಯಾಂಕ್ ಗೆ ಕಳ್ಳರು ನುಗ್ಗಿ, ಚಿನ್ನ ಸೇರಿದಂತೆ ಆರು ಕೋಟಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಕಳ್ಳರು ಬೀಗ ಮುರಿದು ಈ ಕೃತ್ಯ ಎಸಗಿದ್ದಾರೆ.
ಕಳ್ಳರು ಬ್ಯಾಂಕ್ ನಲ್ಲಿದ್ದ 4 ಕೋಟಿ 41 ಲಕ್ಷ ರೂಪಾಯಿ ನಗದು , 1.5 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಶ್ವಾನ ದಳ , ಬೆರಳಚ್ಚು ತಜ್ಞರು ಹಾಗೂ ಮುರಗೋಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .
ಈ ಬಗ್ಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق