ತುಮಕೂರು : ಕೌಟುಂಬಿಕ ಕಲಹಕ್ಕೆ ಮನನೊಂದು ತಾಯಿ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಪಾವಗಡ ತಾಲೂಕಿನ ಉಪ್ಪಾರಹಳ್ಳಿಯ ತಾಂಡದಲ್ಲಿ ನಡೆದಿದೆ.
ಬುಜ್ಜಿ ಬಾಯಿ (35), ಖುಷಿ (9), ಹರ್ಷಿತ (6) ಮೃತ ದುರ್ದೈವಿಗಳು.
ಪತಿ ವೆಂಕಟೇಶ್ ಹಾಗೂ ಬುಜ್ಜಿಬಾಯಿ ನಡುವೆ ಪ್ರತಿದಿನ ಗಲಾಟೆಯಾಗುತ್ತಿತ್ತು.
ನಿನ್ನೆ(ಶನಿವಾರ) ರಾತ್ರಿ ವೆಂಕಟೇಶ್ ಕುಡಿದು ಬಂದು ಪತ್ನಿ ಬುಜ್ಜಿಬಾಯಿ ಜೊತೆ ಗಲಾಟೆ ಮಾಡಿದ್ದಾನೆ. ಇದರಿಂದ ಮನನೊಂದ ಬುಜ್ಜಿಬಾಯಿ ತನ್ನಿಬ್ಬರು ಮಕ್ಕಳ ಜೊತೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ತಿರುಮಣಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
إرسال تعليق