ಪುತ್ತೂರು: ಮರದ ಕೊಂಬೆಯೊಂದು ಬಿದ್ದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.
ತಿಂಗಳಾಡಿ ಸಮೀಪದ ರೆಂಜಲಾಡಿ ನಿವಾಸಿ ಬಾತಿಷ್ ಸುಲ್ತಾನ್ (32) ಮೃತ ದುರ್ದೈವಿ.
ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ಮರ ಕಡಿಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮೃತ ಬಾತಿಷ್ ಎಸ್‍ಕೆಎಸ್‍ಎಸ್‍ಎಫ್ ಸಕ್ರಿಯ ಸದಸ್ಯರಾಗಿದ್ದು, ತಾಯಿ, ಪತ್ನಿ, 6 ಮಂದಿ ಸಹೋದರರು, ಓರ್ವ ಸಹೋದರಿ ಹಾಗೂ 3 ವರ್ಷದ ಪುಟ್ಟ ಮಗುವನ್ನು ಅಗಲಿದ್ದಾರೆ.
ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.
إرسال تعليق