ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟ ಘಟನೆಯೊಂದು ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಆಲಾ ಉಮ್ರೋಡ್ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯರನ್ನು ಪೂನಂ (7) ಮತ್ತು ಸಹೋದರಿ ಆಯುಷಿ (5) ಎಂದು ಗುರುತಿಸಲಾಗಿದೆ.
ಆಯುಷಿ ಎಂಬಾಕೆ ಆಟವಾಡುತ್ತಿದ್ದ ವೇಳೆ ಚರಂಡಿಗೆ ಬಿದ್ದಿದ್ದು, ಇದನ್ನು ಕಂಡ ಸಹೋದರಿ ಪೂನಂ ಚರಂಡಿಗೆ ಹಾರಿ ರಕ್ಷಿಸಲು ಯತ್ನಿಸಿದ್ದಾಳೆ.
ಈ ಸಂಧರ್ಭದಲ್ಲಿ ಇಬ್ಬರೂ ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Post a Comment