ಬೆಂಗಳೂರು: ನವ ಪರ್ವ ಫೌಂಡೇಶನ್ (ರಿ) ಬೆಂಗಳೂರು ವತಿಯಿಂದ ಫೆ.28ರ ಸೋಮವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ರಾಜ್ಯ ಮಟ್ಟದ ಕವಿ ಕಾವ್ಯಸಂಭ್ರಮ, ಪುಸ್ತಕ ಬಿಡುಗಡೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿರುವುದು.
ಖ್ಯಾತ ವೈದ್ಯ ಡಾ. ಟಿ. ಹೆಚ್ ಅಂಜನಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮುರಳೀಧರ್ ಕೆ ಎಸ್ ನವರು ಅಧ್ಯಕ್ಷತೆ ವಹಿಸುವರು. ಈ ಸಂಭ್ರಮದ ಕಾರ್ಯಕ್ರಮದಲ್ಲಿ ವೈದ್ಯಕೀಯ ಹಾಗೂ ಸಮಾಜಸೇವೆಯ ಸಾಧನೆಯನ್ನು ಗುರುತಿಸಿ ಕೊಡಮಾಡುವ ಕೊರೋನ ವಾರಿಯರ್ ಗೌರವ ಪ್ರಶಸ್ತಿಗೆ ಕಾಸರಗೋಡು ಜಿಲ್ಲೆಯ ನೆಲ್ಲಿಕ್ಕಟ್ಟೆ ಚೂರಿಪ್ಪಳ್ಳದಲ್ಲಿರುವ ಪ್ರಕೃತಿ ಆಯುರ್ವೇದ ಆಸ್ಪತ್ರೆಯ ವೈದ್ಯೆಯಾದ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ಆಯ್ಕೆಯಾಗಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق