ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಭಿಮತ: ಸದನದ ಪಾವಿತ್ರ್ಯ ಹಾಳು ಮಾಡುವುದು ರಾಷ್ಟ್ರ ವಿರೇೂಧಿ ಕೆಲಸವೂ ಹೌದು

ಅಭಿಮತ: ಸದನದ ಪಾವಿತ್ರ್ಯ ಹಾಳು ಮಾಡುವುದು ರಾಷ್ಟ್ರ ವಿರೇೂಧಿ ಕೆಲಸವೂ ಹೌದು


ಸಂಸದೀಯ ವ್ಯವಸ್ಥೆಯಲ್ಲಿ ಪ್ರಜಾ ಸದನಕ್ಕೊಂದು ಘನತೆ; ಗೌರವ, ಮರ್ಯಾದೆ ಇದೆ. ಅದೊಂದು ಅನುಭವ ಮಂಟಪದ ಪ್ರಜಾ ದೇಗುಲವಿದ್ದ ಹಾಗೆ. ಅಲ್ಲಿ ಮಾತನಾಡುವಾಗ ಘನತೆ ಗೌರವದಿಂದ ಮಾತಾಡಬೇಕು ಮಾತ್ರವಲ್ಲ ನಡೆದುಕೊಳ್ಳಬೇಕು. ಇದು ಸಂವಿಧಾನಕ್ಕೆ, ಸದನಕ್ಕೆ, ರಾಷ್ಟ್ರಕ್ಕೆ ಕೊಡುವ ಮರ್ಯಾದೆಯೂ ಹೌದು. ರಾಷ್ಟ್ರದ ಗೌರವವಿರುವುದು ಕೇವಲ ಕೆಂಪು ಕೇೂಟೆ ರಾಷ್ಟ್ರ ಧ್ವಜದಲ್ಲಿ ಮಾತ್ರವಲ್ಲ. ಜನರ ನಿಜವಾದ ಬಯಕೆ ಅಡಗಿರುವುದು ಜನಪ್ರತಿನಿಧಿಗಳು ಆಸೀನರಾಗಿ ಕಾನೂನು ಸಂವಿಧಾನ ರೂಪಿಸುವ ಸದನವೂ ಅಷ್ಟೇ ಪವಿತ್ರವಾದ ತಾಣ.


ಆದರೆ ಇಂದು ನಮ್ಮ ಪ್ರಜಾಸದನ ಅರ್ಥಾತ್ ವಿಧಾನ ಸೌಧದ ಒಳಾಂಗಣ ಆಹೇೂರಾತ್ರಿ ಮಲಗಿ ನಿದ್ದೆ ಮಾಡಿ ಧರಣಿ ಮಾಡುವ ತಾಣವಾಗುತ್ತಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಕೊಲೆ ಎಂದೇ ಹೇಳಬೇಕಾಗಿದೆ. ಚಂಬು ದಿಂಬು ಕೊಂಬು ತಂದು ತಿಂದು ತೇಗಿ ಮಜಾ ಮಾಡುವ ಸಾರ್ವಜನಿಕ ಬಿಟ್ಟಿ ಸ್ಥಳವಾಗಿ ನಡೆಸಿಕೊಳ್ಳುತ್ತಿರುವುದು ನಿಜಕ್ಕೂ ವಿಷಾದಕರ. ಈ ಶಾಸಕರಿಗಾಗಿಯೇ ಉಳಿದುಕೊಳ್ಳಲು ಶಾಸಕರ ಭನವವಿದೆ.  ಆದರೆ ಅಲ್ಲಿ ಅವರು ಉಳಿದುಕೊಳ್ಳುವುದಿಲ್ಲ. ಇನ್ನು ಮುಂದೆ ಶಾಸಕರ ಭವನ ಮುಚ್ಚಿ ವಿಧಾನ ಸೌಧದಲ್ಲಿ ಅಹೋರಾತ್ರಿ ಮಲಗಿರುವವರಿಗೆ ಶಾಶ್ವತವಾಗಿ ಅಲ್ಲೇ ಮಲಗಲು ವ್ಯವಸ್ಥೆ ಮಾಡುವುದು ಉಚಿತ.


ಒಂದು ದಿನದ ಸದನ ನಡೆಯಲು ನಾವು ಮಾಡುವ ಖರ್ಚು ಬರೇೂ ಬರಿ 2 ಕೇೂಟಿ ಅನ್ನುವುದು ಸ್ವತ:ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಯೂ ಹೌದು. ಹಾಗಿರುವಾಗ ಯಾವ ಪುರುಷಾರ್ಥಕ್ಕಾಗಿ ನಾವು ಸದನದ ಅಧಿವೇಶನ ನಡೆಸಬೇಕು? ಒಂದು ವೇಳೆ ಇದೇ ರೀತಿಯಲ್ಲಿ ಮುಂದೆ ಧರಣಿ ಹೊಡೆದಾಟ ಗಲಾಟೆ ಮುಷ್ಕರ ಮಾಡುವುದಾರೆ ಬೆಂಗಳೂರಿನಲ್ಲಿ ಸಾರ್ವಜನಿಕರ ಮುಷ್ಕರ ಧರಣಿಗಾಗಿ ಕಾದಿರಿಸಿದ "ಫ್ರೀಡಂ ಪಾರ್ಕ"ನ್ನೆ ಇವರಿಗೆ ನೀಡುವುದು ಉಚಿತ ಅನ್ನುವುದು ನಮ್ಮೆಲ್ಲರ ಅಭಿಪ್ರಾಯ. ಪ್ರಜಾ ನಾರಾಯಣನ ದೇಗುಲವಾದ ಸದನದ ಪಾವಿತ್ರ್ಯತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಅನ್ನುವುದು ನನ್ನ ಖಚಿತ ಅಭಿಪ್ರಾಯ

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



free website counter

0 Comments

Post a Comment

Post a Comment (0)

Previous Post Next Post