ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ಇಂಜಿನಿಯರಿಂಗ್ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿರುವ ರಘುನಂದನ್.ಕೆ.ಆರ್ ಅವರು ಎಸ್.ಎಂ.ವಿ.ಐ.ಟಿ ಕಾಲೇಜಿನ ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಮತ್ತು ನಿಟ್ಟೆಯ ಎಂ.ಸಿ.ಎ ವಿಭಾಗದ ಮುಖ್ಯಸ್ಥ ಡಾ.ಸುರೇಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ 'ಪಬ್ಲಿಕ್ ಕೀ ಕ್ರಿಪ್ಟೋಗ್ರಫಿ ಫಾರ್ ಎಫೀಷಿಯಂಟ್ ಟೈಂ ಕಾಂಪ್ಲೆಕ್ಸಿಟಿ ಆಂಡ್ ರೋಬಸ್ಟ್ನೆಸ್ ಯೂಸಿಂಗ್ ನೋವೆಲ್ ಟೆಕ್ನೀಕ್ಸ್ (Public Key Cryptography For efficient Time Complexity & Robustness using Novel Techniques) ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯು ಡಾಕ್ಟರ್ ಆಫ್ ಫಿಲಾಸಫಿ (PhD) ಪದವಿಯನ್ನು ಘೋಷಿಸಿದೆ. ಇವರು ದಿ.ರಮೇಶ್ ರಾವ್ ಮತ್ತು ಲಲಿತಾ ರಾವ್ ಬೀದೀಮನೆ ಇವರ ಸುಪುತ್ರರಾಗಿರುತ್ತಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق