ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಒಣತ್ಯಾಜ್ಯದ ಸಮರ್ಪಕ ನಿರ್ವಹಣೆಯಿಂದ ಸ್ವಯಂಪೂರ್ಣ ಕೃಷಿ: ಪಯಸ್ವಿನಿ ಕ್ಲಬ್‌ನಲ್ಲಿ ನಾಳೆ ಸಂಜೆ ಸಂವಾದ

ಒಣತ್ಯಾಜ್ಯದ ಸಮರ್ಪಕ ನಿರ್ವಹಣೆಯಿಂದ ಸ್ವಯಂಪೂರ್ಣ ಕೃಷಿ: ಪಯಸ್ವಿನಿ ಕ್ಲಬ್‌ನಲ್ಲಿ ನಾಳೆ ಸಂಜೆ ಸಂವಾದ



ಮಂಗಳೂರು: ಜನಪ್ರಿಯ ಶ್ರಾವ್ಯ ಸಾಮಾಜಿಕ ತಾಣವಾದ ಕ್ಲಬ್‌ ಹೌಸ್‌ನ ಪಯಸ್ವಿನಿ ಕ್ಲಬ್ ವೇದಿಕೆಯಲ್ಲಿ ನಾಳೆ  ಭಾನುವಾರ ಸಂಜೆ (ಫೆ. 6 ರಂದು) 6:00 ಗಂಟೆಗೆ 'ಒಣತ್ಯಾಜ್ಯದ ಸಮರ್ಪಕ ನಿರ್ವಹಣೆಯಿಂದ ಸ್ವಯಂಪೂರ್ಣ ಕೃಷಿ' ವಿಷಯದಲ್ಲಿ ಅನುಭವೀ ಕೃಷಿಕರ ನಡುವೆ ಸಂವಾದ ನಡೆಯಲಿದೆ.


ಕೃಷಿಕರ ಸಂವಾದ ಪ್ರಗತಿಪರ ಕೃಷಿಕರ ಜೊತೆ- ಘೋಷವಾಕ್ಯದೊಂದಿಗೆ ಈಗಾಗಲೇ ಹಲವಾರು ಅರ್ಥಪೂರ್ಣ ಸಂವಾದಗಳನ್ನು ಏರ್ಪಡಿಸಿ ಯಶಸ್ವಿಯಾಗಿರುವ ಪಯಸ್ವಿನಿ ಕ್ಲಬ್‌ ಅಡಿಕೆ ಕೃಷಿಕರ ಧ್ವನಿಚೇತನವಾಗಿ ಮೂಡಿಬಂದಿದೆ.


ನಾಳಿನ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮುಂಡಾಜೆಯ ಪ್ರಗತಿಪರ ಕೃಷಿಕರಾದ ಗಜಾನನ ವಝೆ ಅವರು ಪಾಲ್ಗೊಳ್ಳಲಿದ್ದಾರೆ. ಸಾವಿರಾರು ಮಂದಿ ಕೃಷಿಕರು ಕೇಳುಗ ವರ್ಗದಲ್ಲಿ ಇರಲಿದ್ದು, ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.


ಆಸಕ್ತರು ನಾಳೆ ಸಂಜೆ ಈ ಲಿಂಕ್ ಮೂಲಕ ಪಯಸ್ವಿನಿ ಕ್ಲಬ್ ಹೌಸ್ ಸಂವಾದದಲ್ಲಿ ಭಾಗಿಯಾಗಬಹುದು. https://www.clubhouse.com/event/PAJ6nkDR


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post