ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾ ನೋಡಿದ ಚಿತ್ರ: ಜೀರೋ ಮೇಡ್ ಇನ್ ಇಂಡಿಯ- ರೋಚಕ ಕತೆ, ಸುಂದರ ನಿರೂಪಣೆ

ನಾ ನೋಡಿದ ಚಿತ್ರ: ಜೀರೋ ಮೇಡ್ ಇನ್ ಇಂಡಿಯ- ರೋಚಕ ಕತೆ, ಸುಂದರ ನಿರೂಪಣೆ



ಗಿರಿದೇವ್ ಹಾಸನ್ ನಿರ್ದೇಶಿಸಿರುವ 'ಜೀರೋ ಮೇಡ್ ಇನ್ ಇಂಡಿಯಾ' 2016 ರಲ್ಲಿ ಬಿಡುಗಡೆ ಹೊಂದಿದ ಚಲನಚಿತ್ರ. ಈ ಸಿನೆಮಾದಲ್ಲಿ ಶಂಕರಣ್ಣ ಮತ್ತು ಅಪ್ಪು ಮುಖ್ಯ ಪಾತ್ರಧಾರಿಯಾಗಿ ನಟನೆ ಮಾಡಿದ್ದಾರೆ.


ಜೀವನ ಎಂಬುದು ಒಂದು ಸುಂದರವಾದ ಪಯಣ. ಆ ಜೀವನದಲ್ಲಿ ಅದೆಷ್ಟೋ ಕಷ್ಟ, ಅನುಮಾನ, ದುಃಖಗಳು ಬಂದೆ ಬರುತ್ತೆ. ಒಂದೊಂದು ಸಲ ಸಂತೋಷ ಹೀಗೆ ಹಲವಾರು ಸನ್ನಿವೇಶಗಳು ನಡೆದು ಹೋಗುತ್ತದೆ. ಇವೆಲ್ಲ ಕಷ್ಟಗಳನ್ನು ಜೊತೆ ಹೇಗೆ ಸಾಧನೆ ಮಾಡಬಹುದು ಎನ್ನುವದನ್ನು ಹಾಗೂ ಇಂಗ್ಲಿಷ್ ಭಾಷೆಯ ಬಳಕೆ ಹಾಗೂ ಉನ್ನತ ಶಿಕ್ಷಣದ ಮೌಲ್ಯಗಳನ್ನು ತೊರ್ಪಡಿಸಿದ ಸಿನೆಮಾ.


ಒಂದು ಪುಟ್ಟ ಮನೆ ಅದು ಬಾಡಿಗೆ ಮನೆಯ ವಾಸ ಈ ಮನೆಯಲ್ಲಿ ಅಪ್ಪ ಮಗನ ಇಬ್ಬರದ್ದೇ ಪುಟ್ಟ ಸಂಸಾರ. ಶಂಕರನು ಹೆಂಡತಿಯನ್ನು ಕಳೆದುಕೊಂಡಿದ್ದ. ಆದರೆ ಮಗನಿಗೆ ಯಾವುದೇ ರೀತಿಯಲ್ಲಿ ತೊಂದರೆ ಬಾರದ ಹಾಗೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಶಂಕರನು ಇಂಜಿನಿಯರಿಂಗ್ ಕಲಿತು ಉದ್ಯೋಗ ಸಿಗದ ಕಾರಣ ನಿರುದ್ಯೋಗಿಯಾದನು. ಆದರೆ ತನ್ನ ಮಗ ಅಪ್ಪುವಿನ ಭವಿಷ್ಯದ ಬಗ್ಗೆ ಚಿಂತಿಸುತ್ತ ಆತನ ಭವಿಷ್ಯದ ಕನಸುಗಳನ್ನು ಈಡೇರಿಸಬೇಕಾಗಿ ಕೂಲಿ ಕೆಲಸ ಮಾಡಿ ಹಣ ಸಂಪಾದನೆ ಮಾಡುತಿದ್ದ. ಶಂಕರನು ನೋವುಗಳನ್ನೆಲ್ಲ ಮನದಲ್ಲೇ ಇಟ್ಟುಕೊಂಡು ಅರೆಕಾಲಿಕ ಕೆಲಸ ಮಾಡಿಕೊಂಡು ಮಗನನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸುತ್ತಾನೆ. ಈ ಹಿಂದೆ ಕನ್ನಡ ಮಾಧ್ಯಮದಲ್ಲಿ ಓದಿದ ಅಪ್ಪುಗೆ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಎಲ್ಲರೂ ಅಪ್ಪುವನ್ನು ಶೂನ್ಯ ಎಂದೇ ಪರಿಗಣಿಸುತ್ತಿದ್ದರು.


ಆದರೆ ಅಪ್ಪು ಎಲ್ಲಾ ನೋವು ಅವಮಾನಗಳನ್ನು ಸಹಿಸಿಕೊಂಡು ಇದ್ದ. ಶಾಲೆಯಲ್ಲಿ ಪರೀಕ್ಷೆ ನಡೆದಿರುತ್ತದೆ ಅದರಲ್ಲಿ ಅಪ್ಪುಗೆ ಜೀರೋ ಬಂದಿರುತ್ತದೆ ಇದನ್ನು ಶಂಕರನಿಗೆ ಹೇಗೆ ಹೇಳೋದು ಎಂದು ಆ ಜೀರೋಗೆ ಇನ್ನೊಂದು ಜೀರೋ ಸೇರಿಸಿ ಆದರ ಮುಂದೆ ಒಂದು ಸೇರಿಸುತ್ತಾನೆ ಆಗ 100 ಆಗುತ್ತದೆ ಎಂದು ಯೋಚಿಸಿ ಮನೆಗೆ ತೆರಳುತ್ತಾನೆ. ಶಂಕರನು ಅಪ್ಪುವಿನ ಬ್ಯಾಗ್ ಅಲ್ಲಿದ್ದ ಪ್ರಶ್ನೆ ಪತ್ರಿಕೆ ತೆಗೆದು ನೋಡಿದಾಗ ತುಂಬಾ ಖುಷಿ ಆಗುತ್ತದೆ. ಎಲ್ಲರ ಜೊತೆಗೂ ಹೇಳುತ್ತಾ ಬರುತ್ತಾನೆ. ಆದರೆ ಅಪ್ಪುಗೆ ಏನು ಮಾಡಬೇಕು ಎಂದು ತೋಚದೆ ಸುಮ್ಮನಾಗಿ ಬಿಡುತ್ತಾನೆ. ಆದರೆ ಅಪ್ಪುಗೆ ಜೀರೋ ಬಂದಿರುವ ವಿಷಯ ಶಂಕರನಿಗೆ ಗೊತ್ತಾದ ಮೇಲೆ. ತನ್ನ ಮಗ ತನಗೆ ಮೋಸ ಮಾಡುತ್ತಾನೆ ಎಂದು ಯೋಚನೆಯ ಗುಂಗಿನಲ್ಲಿ ಕೂತಿದ್ದ. ಅಪ್ಪು ಯಾವುದೇ ಕಾರಣಕ್ಕೆ ಶಂಕರನಿಗೆ ನೋವು ಆಗಬಾರದು ಎಂದು ಅಪ್ಪು ಯಾವುದೇ ವಿಷಯಗಳನ್ನು ಹೇಳಿಕೊಳ್ಳುತ್ತಿರಲಿಲ್ಲ.ಆದರೆ ಈ ವಿಷಯ ಗೊತ್ತಾದ ಬಳಿಕ ಶಂಕರನು ಒಂದು ಅಪಘಾತಕ್ಕೆ ಈಡಾಗುತ್ತಾನೆ. ಆ ಘಟನೆ ಅಪ್ಪುವಿಗೆ ನೋವು ಉಂಟು ಮಾಡುತ್ತದೆ. ಆದರೆ ಅಪ್ಪು ಯಾವುದಕ್ಕೂ ಅಂಜದೆ ತನ್ನ ಹಠ ಛಲವನ್ನು ಸಾಧಿಸುತ್ತಾನೆ. ಕೊನೆಗೆ ಅಪ್ಪು ಗೆದ್ದೇ ಗೆಲ್ಲುತ್ತಾನೆ. ಸಾಧಿಸುವ ಛಲ ಇದ್ದರೆ ಯಾವುದನ್ನೂ ಸಾಧಿಸಬಹುದು ಎಂದು ಈ ಸಿನೆಮಾದಲ್ಲಿ ಕಾಣಬಹುದು.

-ರಸಿಕಾ ಮುರುಳ್ಯ

ತೃತೀಯ ಪತ್ರಿಕೋದ್ಯಮ

ವಿವೇಕಾನಂದ ಕಾಲೇಜು ಪುತ್ತೂರು

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



free website counter

0 تعليقات

إرسال تعليق

Post a Comment (0)

أحدث أقدم