ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪೇಟೆಯಲ್ಲಿ ಬೈಕ್ ಗಳ ಕದ್ದು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಪೇಟೆಯಲ್ಲಿ ಬೈಕ್ ಗಳ ಕದ್ದು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

 


ಬೆಂಗಳೂರು: ನಗರದಲ್ಲಿ ಬೈಕ್ ಗಳನ್ನು ಕದ್ದು ಹಳ್ಳಿಗಾಡಿನ ರೈತರಿಗೆ ಮಾರುತ್ತಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 6. 70 ಲಕ್ಷ ಮೌಲ್ಯದ ಬೈಕ್ ಸೀಜ್ ಮಾಡಿದ್ದಾರೆ.

ಚಿಂತಾಮಣಿಯ ವೆಂಕಟರಮಣ ಬಂಧಿತ ಬೈಕ್ ಕಳ್ಳನಾಗಿದ್ದು, ಬಂಧಿತನ ವಿರುದ್ಧ 40 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

ಇತ್ತೀಚೆಗೆ ಜೈಲಿ ನಿಂದ ಬೇಲ್ ಮೇಲೆ ಹೊರ ಬಂದು ಮತ್ತೆ‌ ಹಳೆ ಚಾಳಿ ಬುದ್ಧಿ  ಮುಂದುವರಿಸಿದ್ದು ಕ್ಷಣ ಮಾತ್ರ ದಲ್ಲಿ ಬೈಕ್ ಹ್ಯಾಂಡಲ್ ಮುರಿಯುತ್ತಿದ್ದ ಆರೋಪಿ, ಕೆ.ಆರ್.ಪುರಂ, ಜ್ಞಾನಭಾರತಿ, ಬ್ಯಾಟರಾಯನಪುರ ಸೇರಿದಂತೆ 10 ಕ್ಕೂ ಹೆಚ್ಚು ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆಸಿದ್ದಾನೆ.

ಕೆಂಗೇರಿ ಪೊಲೀಸರಿಂದ ಬೈಕ್ ಕಳ್ಳನ ಸೆರೆಯಾಗಿದ್ದು, ಅನುಮಾನಸ್ಪದವಾಗಿ ಓಡಾಡುತ್ತಿದ್ದ ವೆಂಕಟೇಶ್ ನ ವಿಚಾರಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.


0 تعليقات

إرسال تعليق

Post a Comment (0)

أحدث أقدم