ನವದೆಹಲಿ: ಕೇಂದ್ರ ಹಣಕಾಸು ಬಜೆಟ್ ಮಂಡನೆ ಹಿನ್ನೆಲೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ಗಳ ಬೆಲೆಯನ್ನು ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು ಇಳಿಸಿವೆ.
ಫೆಬ್ರವರಿ 1ರಿಂದ 19 ಕೆಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 91.50 ರೂಪಾಯಿಯಷ್ಟು ಇಳಿಕೆ ಮಾಡಲಾಗಿದೆ. ಅಂದರೆ, ದೆಹಲಿಯಲ್ಲಿ 19ಕೆಜಿ ಸಿಲಿಂಡರ್ನ ಬೆಲೆ 1907 ರೂಪಾಯ ಆಗಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಹೊಸ ವರ್ಷದ ಮೊದಲ ದಿನದಂದು ವಾಣಿಜ್ಯ ಸಿಲಿಂಡರ್ನ ಬೆಲೆಯನ್ನು ನೂರು ರೂಪಾಯಿಗಳ ಕಡಿತ ಮಾಡಲಾಗಿತ್ತು. ಇದೀಗ ಸುಮಾರು 91 ರೂಪಾಯಿ ಕಡಿತಗೊಳಿಸಲಾಗಿದ್ದು, 14.2 ಕೆಜಿ ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
Post a Comment