ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಟ್ಲ ಘಟಕದ ಗೃಹರಕ್ಷಕ ದಿವಂಗತ ಪ್ರಕಾಶ್ ಮನೆಗೆ ಕಮಾಂಡೆಂಟ್‌ ಭೇಟಿ

ವಿಟ್ಲ ಘಟಕದ ಗೃಹರಕ್ಷಕ ದಿವಂಗತ ಪ್ರಕಾಶ್ ಮನೆಗೆ ಕಮಾಂಡೆಂಟ್‌ ಭೇಟಿ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ವಿಟ್ಲ ಘಟಕದ ಗೃಹರಕ್ಷಕರಾದ ಪ್ರಕಾಶ್ ಇವರು ದಿನಾಂಕ 04-02-2022 ರಂದು ಬಂಟ್ವಾಳ ಆರ್.ಟಿ.ಓ ಕರ್ತವ್ಯದಲ್ಲಿರುವಾಗ ಅಪಘಾತದಿಂದ ಮೃತಪಟ್ಟಿರುತ್ತಾರೆ. ಇವರ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಭೇಟಿ ನೀಡಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿ, ಸರಕಾರದಿಂದ ಸಿಗುವ ಸೌಲಭ್ಯವನ್ನು ದೊರಕಿಸಿ ಕೊಡುವುದಾಗಿ ಆಶ್ವಾಸನೆ ನೀಡಿದರು.


ಈ ಸಂದರ್ಭದಲ್ಲಿ ವಿಟ್ಲ ಘಟಕದ ಗೃಹರಕ್ಷಕರು ಸಂಗ್ರಹ ಮಾಡಿದ ಹಣವನ್ನು ದಿ|| ಪ್ರಕಾಶ್ ಅವರ ಕುಟುಂಬಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ವಿಟ್ಲ ಘಟಕದ ಪ್ರಭಾರ ಘಟಕಾಧಿಕಾರಿ ಸಂಜೀವ, ವಿಟ್ಲ ಘಟಕದ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

0 Comments

Post a Comment

Post a Comment (0)

Previous Post Next Post