ಸಮಾಜ ಸೇವಾ ಸಹಕಾರಿ ಸವಿ ಸಂಭ್ರಮ-2022
ಬಂಟ್ವಾಳ: ಇಲ್ಲಿನ ಸಮಾಜ ಸೇವಾ ಸಹಕಾರಿ ಸಂಘದ ಸಂಸ್ಥಾಪಕ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಡಾ. ಅಮ್ಮೆಂಬಳ ಬಾಳಪ್ಪ ಅವರ 100 ನೇ ಜನ್ಮದಿನಾಚರಣೆ ಪ್ರಯುಕ್ತ 'ಸಮಾಜ ಸೇವಾ ಸಹಕಾರಿ ಸವಿ ಸಂಭ್ರಮ-2022' ಕಾರ್ಯಕ್ರಮ ಇದೇ 27 ರಂದು ಬೆಳಿಗ್ಗೆ 10 ಗಂಟೆಗೆ ಬಂಟ್ವಾಳ ಬೈಪಾಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಕುಲಾಲ್ ಹೇಳಿದ್ದಾರೆ.
ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಘದ ಅಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವವಚನ ನೀಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು, ಕಲ್ಲಡ್ಕ ರೈತರ ಸಹಕಾರಿ ಸಂಘದ ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಚೇಂಡ್ಲ, ಉಡುಪಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥ ಡಾ.ದುಗ್ಗಪ್ಪ ಕಡೆಕಾರ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.
ಇದೇ ವೇಳೆ ದೇರಳಕಟ್ಟೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ತಂಡದಿಂದ 'ಉಚಿತ ನೇತ್ರ ತಪಾಸಣಾ ಶಿಬಿರ' ಮತ್ತು ಗುಣಮಟ್ಟದ ಕನ್ನಡ ವಿತರಣೆ, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾಥರ್ಿವೇತನ, ಸ್ವ ಸಹಾಯ ಸಂಘಗಳ ಸಮ್ಮಿಲನ ಮತ್ತು ಗುರುತಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಪದ್ಮನಾಭ ವಿ. ತಿಳಿಸಿದರು.
ಪೆರ್ಡೂರು ರಾಮ ಕುಲಾಲ್ ಗೆ ಬಾಳಪ್ಪ ಪ್ರಶಸ್ತಿ:
ಹಿರಿಯ ಸಹಕಾರಿ ಧುರೀಣ ಪೆರ್ಡೂರು ರಾಮ ಕುಲಾಲ್ ಇವರಿಗೆ ಡಾ.ಅಮ್ಮೆಂಬಳ ಬಾಳಪ್ಪ ಪ್ರಶಸ್ತಿ ಪ್ರದಾನ, ಮಧ್ಯಾಹ್ನ ಗಂಟೆ 2.30ರಿಂದ ಅಮೂಲ್ಯ ಸ್ವಸಹಾಯ ಸಂಘ ಮತ್ತು ಸಂಘದ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6 ಗಂಟೆಗೆ ಮಾಣಿಲ ಯಕ್ಷಗಾನ ತಂಡದಿಂದ 'ಸೂರ್ಯ ರಶ್ಮಿ' ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಜನಾರ್ದನ ಬೊಂಡಾಲ, ವಿ. ವಿಜಯ ಕುಮಾರ್, ನಾಗೇಶ್ ಬಾಳೇಲು, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಇದ್ದರು.
إرسال تعليق