ಬಾಗಲಕೋಟೆ: ಮಾಜಿ ಸಂಸದ ಎಚ್.ಬಿ. ಪಾಟೀಲ ಅವರು ನಿಧನ ಹೊಂದಿದ್ದು, ಇವರಿಗೆ 80 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಟೀಲ ಅವರನ್ನು ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಮಂಗಳವಾರ ನಿಧನರಾದರು.
ಇಂದು (ಬುಧವಾರ) ಮಧ್ಯಾಹ್ನ ಸ್ವಗ್ರಾಮ ಬಾದಾಮಿ ತಾಲೂಕಿನ ರಡ್ಡೇರ ತಿಮ್ಮಾಪುರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪಾಟೀಲ ಅವರಿಗೆ ಪತ್ನಿ, ಐವರು ಪುತ್ರಿಯರು, ಪುತ್ರ ಇದ್ದಾರೆ.
Post a Comment