ಬಾಗಲಕೋಟೆ: ಮಾಜಿ ಶಾಸಕ ಜಿ.ವಿ.ಮಂಟೂರ (92) ಇಂದು ಬೆಳಗ್ಗೆ 5.30ಕ್ಕೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇಂದು ಸಂಜೆ 4 ಗಂಟೆಗೆ ತಾಲೂಕಿನ ಅವರ ಸ್ವಗ್ರಾಮ ಖಜ್ಜಿಡೋಣಿಯಲ್ಲಿ ಅಂತ್ಯಕ್ರಿಯೆ ನಡೆಯಿತು.
ಜಿ.ವಿ.ಮಂಟೂರ ಅವರು ಬಾಗಲಕೋಟೆ ಕ್ಷೇತ್ರದಲ್ಲಿ ಎರಡು ಸಲ ಶಾಸಕರಾಗಿದ್ದರು. 1983ರಲ್ಲಿ ಪಕ್ಷೇತರರಾಗಿ ಮತ್ತು 1985ರಲ್ಲಿ ಜನತಾ ಪಕ್ಷದಿಂದ ಗೆದ್ದು ವಿಧಾನಸಭೆಗೆ ಆಯ್ಕೆಯಾಗಿದ್ದರು.
ಮಾಜಿ ಶಾಸಕ ಜಿ.ವಿ. ಮಂಟೂರ ಅವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ
إرسال تعليق