ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ “ಅಗ್ನಿ ಮತ್ತು ಸುರಕ್ಷತೆ” ಕುರಿತು ಒಂದು ದಿನದ ಕಾರ್ಯಾಗಾರ

ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ “ಅಗ್ನಿ ಮತ್ತು ಸುರಕ್ಷತೆ” ಕುರಿತು ಒಂದು ದಿನದ ಕಾರ್ಯಾಗಾರ


ಮಂಗಳೂರು: ಮುಕ್ಕಾದ ಶ್ರೀನಿವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ, ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ (ಸಂಬಂಧಿತ ಆರೋಗ್ಯ ವಿಜ್ಞಾನ ಕಾಲೇಜಿನ), ವಿಧಿವಿಜ್ಞಾನ ಮತ್ತು ಅಪರಾಧ ಶಾಸ್ತ್ರ ವಿಭಾಗವು ಒಂದು ದಿನದ ಕಾರ್ಯಾಗಾರವನ್ನು ಬುಧವಾರ (ಫೆ.23) ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ಸುಮಾರು 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕದ್ರಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಮದ್ ಜುಲ್ಫಿಕರ್ ನವಾಝ್ ಕೆ.ಪಿ, ಹಾಗೂ ಸಹಾಯಕ ಅಗ್ನಿಶಾಮಕ ಅಧಿಕಾರಿ ಸುನಿಲ್ ಕುಮಾರ್ ಆಗಮಿಸಿದ್ದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರವು ಘೋಷಿಸಿದ “ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ವಾರ” ಎಂದು ಗುರುತಿಸಲಾದ ಈ ವಾರದ ಮಹತ್ವವನ್ನು ವಿವರಿಸಿದರು.


 ಮುಖ್ಯಾಧಿಕಾರಿ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ವಿಧಿವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ವೃಂದಾ ಜೆ.ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಡಾ. ವೃಂದಾ ಜೆ. ಭಟ್ ಅವರು ಅಗ್ನಿ ಮತ್ತು ಅದರ ಪ್ರಭಾವದ ಮೇಲೆ ಬೆಳಕು ಚೆಲ್ಲಿದರು. ಹಾಗೆಯೇ ಅಗ್ನಿ ವಿಧಿ ವಿಜ್ಞಾನ ಮತ್ತು ವಿಧಿವಿಜ್ಞಾನದ ತನಿಖೆಯ ಕ್ಷೇತ್ರದಲ್ಲಿ ಇದರ ಅಗತ್ಯತೆಯ ಕುರಿತು ಮಾಹಿತಿಯನ್ನು ನೀಡಿದರು. ಮುಖ್ಯಾಧಿಕಾರಿ ಡಾ. ಉದಯ್ ಕುಮಾರ್ ರಾವ್, ಶ್ರೀನಿವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಕೇಂದ್ರ (SIMS & RC)  ದೇವಶೀಲನ್. ಎಸ್, ಕಾರ್ಯಾಗಾರದ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಾಗಾರದ ಸಮಾಲೋಚನೆಯನ್ನು ಮಹಮ್ಮದ್ ಜುಲ್ಫಿಕರ್ ನವಾಜ್ ಕೆ.ಪಿ ಅವರು ಮಾಡಿದರು, ಈ ಸಂದರ್ಭದಲ್ಲಿ ಅವರು ಅಗ್ನಿ ಹಾಗೂ ವಿವಿಧ ರೀತಿಯ ಅಗ್ನಿಗಳು, ಅದರ ವರ್ಗೀಕರಣ ಮತ್ತು ಅಗ್ನಿಯನ್ನು ನಂದಿಸುವ ಕೆಲವು ಸಾಧನಗಳನ್ನು ಪ್ರದರ್ಶಿಸಿದರು.


ಚರ್ಚೆಯ ನಂತರ ತೆರದ ಮೈದಾನದಲ್ಲಿ ಪ್ರಾತ್ಯಕ್ಷಿಕೆ ಅಧಿವೇಶನವನ್ನು ಮಾಡಲಾಯಿತು, ಅಲ್ಲಿ ವಿವಿಧ ರೀತಿಯ ಅಗ್ನಿಶಾಮಕಗಳ ಬಳಕೆಯನ್ನು ಅದರ ಉಪಯುಕ್ತತೆಗಳನ್ನು ಪ್ರದರ್ಶಿಸಲಾಯಿತು. ಒದ್ದೆಯಾದ ಹೊದಿಕೆ, ನೀರಿನ ಜೆಟ್‌ಗಳು, ಫೋಮ್ ಆದಾರಿತ ಅಗ್ನಿಶಾಮಕಗಳು, ಒಣ ರಾಸಯನಿಕ ಪುಡಿಗಳು (DCP) ಇತ್ಯಾದಿಗಳ ಸಹಾಯದಿಂದ ಬೆಂಕಿಯನ್ನು ನಂದಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. ಹಾಗೆಯೇ ಅಲ್ಲಿ ನೆರೆದಿದ್ದಂತಹ ಸ್ವಯಂ ಸೇವಕರಿಗೂ ವಿವಿಧ ರೀತಿಯ ಅಗ್ನಿಶಾಮಕಗಳನ್ನು ಉಪಯೋಗಿಸಲು ಅವಕಾಶವನ್ನು ನೀಡಿದರು. ಅಧಿಕಾರಿಗಳು ವಿವಿಧ ರೀತಿಯ ಜೆಟ್ ನೀರು ಸಿಂಪಡಿಸುವ ಸ್ಟ್ರಿಂಕ್ಲರ್‌ಗಳು, ಅಗ್ನಿ ಬೈಕ್‌ಗಳ (Fire Bike) ಬಳಕೆಯ ಅನುಕೂಲತೆಗಳನ್ನು ವಿವರಿಸಿದರು.


ಕುಮಾರಿ ಸಾಂಡ್ರಾ ಮತ್ತು ಮಹೇಶ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀಮತಿ ಸ್ವಾತಿ. ಡಿ ಸ್ವಾಗತಿಸಿದರು. ಶ್ರೀಮತಿ ಲಾವಣ್ಯ ಪಿ.ಎಸ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಸಾಹಿಲ್ ಸಿ ಧನ್ಯವಾದ ಸಮರ್ಪಿಸಿದರು.

hit counter


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post